ಶಿವಮೊಗ್ಗ: ನಾಳೆಯಿಂದ ಮೂರು ದಿನ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮ

Upayuktha
0


ಶಿವಮೊಗ್ಗ: ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಮೂರು ದಿನ ವಿಶೇಷ ಉಪನ್ಯಾಸ ಕಾರ್ಯಕ್ರಮ ನಾಳೆಯಿಂದ (ಆ.28) ಆಗಸ್ಟ್ 30ರ ವರೆಗೆ ನಡೆಯಲಿದೆ. ನಮೋ ಬ್ರಿಗೇಡ್‌ 2.0, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಈ ಸರಣಿ ಉಪನ್ಯಾಸ ಆಯೋಜಿಸಲಾಗಿದ್ದು ಬಿ.ಎಚ್‌ ರಸ್ತೆಯ ಕರ್ನಾಟಕ ಸಂಘ ಭವನದಲ್ಲಿ ಉಪನ್ಯಾಸ ನಡೆಯಲಿದೆ.


ಅಜೇಯ ಸಂಸ್ಕೃತಿ ಬಳಗ ಹಾಗೂ ನಮೋ ಬ್ರಿಗೇಡ್ ಶಿವಮೊಗ್ಗದ ವತಿಯಿಂದ “ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!” ಎಂಬ ಶೀರ್ಷಿಕೆಯಡಿ ಚಕ್ರವರ್ತಿ ಸೂಲಿಬೆಲೆಯವರಿಂದ ಆಗಸ್ಟ್ 28, 29 ಮತ್ತು 30 ರಂದು ಶಿವಮೊಗ್ಗದ ಬಿ.ಎಚ್‌ ರಸ್ತೆಯ ಕರ್ನಾಟಕ ಸಂಘ ಭವನದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪಾಲ್ಗೊಳ್ಳುವಂತೆ ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ರಾಮಾಚಾರ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ವಿಸುವರು ಹೆಚ್ಚಿನ ಮಾಹಿತಿಗಾಗಿ 9019562277 ರಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top