ಸತ್ತವರ ಮನೆಯ ವೈಕುಂಠ ಸಮಾರಾಧನೆಯಲ್ಲೂ ಮಧ್ಯಾಹ್ನ ಊಟದ ಜೊತೆ ಬೂಂದಿಕಾಳು, ಅರಿಶಿನ ಕುಂಕುಮ, ಅಪ್ಪೆಮಿಡಿ ಸಾರು, ಕುಡಿಯುವ ಜೀವ ಜಲವನ್ನೂ ವಿಷಕಾರಿ ಪ್ಲಾಸ್ಟಿಕ್‌ನಲ್ಲಿ ಕೊಡಲಾಗುತ್ತದೆ!!
99% ಪ್ಲಾಸ್ಟಿಕ್‌ಗಳು ಪಳೆಯುಳಿಕೆ ಫೀಡ್‌ಸ್ಟಾಕ್‌ಗಳಿಂದ (ಪೆಟ್ರೋಲಿಯಂ ಇತ್ಯಾದಿ) ತಯಾರಿಸಲ್ಪಟ್ಟಿರುವುದರಿಂದ, ಪ್ಲಾಸ್ಟಿಕ್ ಮಾಲಿನ್ಯವು ಹವಾಮಾನ ಬದಲಾವಣೆಯೊಂದಿಗೆ ನಿಸ್ಸಂದೇಹವಾಗಿ ಸಂಬಂಧಿಸಿದೆ.
ಜಗತ್ತು ಪ್ಲಾಸ್ಟಿಕ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯವು ಪ್ರಪಂಚದಾದ್ಯಂತ ಕಂಡುಬರುತ್ತದೆ. *ಪಳೆಯುಳಿಕೆ ಇಂಧನದ ಹೊರತೆಗೆಯುವಿಕೆ, ಉತ್ಪಾದನೆ, ಬಳಕೆ, ಮರುಬಳಕೆ ಮತ್ತು ವಿಲೇವಾರಿ - ಪ್ಲಾಸ್ಟಿಕ್‌ಗಳು ತಮ್ಮ ಜೀವನಚಕ್ರದ ಪ್ರತಿಯೊಂದು ಹಂತದಲ್ಲೂ ಜನರು ಮತ್ತು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ.
ಜೀವವೈವಿಧ್ಯತೆ, ಹವಾಮಾನ ಬದಲಾವಣೆ, ಮಾನವ ಆರೋಗ್ಯ ಪರಿಣಾಮಗಳನ್ನು ಅನುಭವಿಸಲಾಗುತ್ತದೆ.
ಪ್ಲಾಸ್ಟಿಕ್ ಜೀವನ ಚಕ್ರದ ಉದ್ದಕ್ಕೂ ಹಸಿರುಮನೆ ಅನಿಲಗಳು ಹೊರಸೂಸುವುದರಿಂದ ಜಾಗತಿಕ ತಾಪಮಾನ ಏರಿಕೆಯನ್ನು 1.5 ° C ಗಿಂತ ಕಡಿಮೆ ಇರಿಸಲು ಜಾಗತಿಕ ಸಮುದಾಯದ ಸಾಮರ್ಥ್ಯವನ್ನು ಪ್ಲಾಸ್ಟಿಕ್‌ಗಳು ಬೆದರಿಸುತ್ತಿವೆ.
ವಾಸ್ತವವಾಗಿ, ಪ್ಲಾಸ್ಟಿಕ್‌ಗಳ ಹೊರತೆಗೆಯುವಿಕೆ, ಶುದ್ಧೀಕರಣ ಮತ್ತು ತಯಾರಿಕೆಯು ಇಂಗಾಲದ ತೀವ್ರ ಚಟುವಟಿಕೆಗಳಾಗಿವೆ. 2015 ರಲ್ಲಿ, ಪ್ಲಾಸ್ಟಿಕ್ ಉತ್ಪಾದನೆಯಿಂದ CO 2 ಮತ್ತು ಇತರ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ಗಣನೀಯವಾಗಿ ಮೇಲೇರಿದೆ.
ಪ್ಲಾಸ್ಟಿಕ್ ತ್ಯಾಜ್ಯದ ದಹನವು ವಿಷಕಾರಿ ಮಾಲಿನ್ಯಕಾರಕಗಳ ಜೊತೆಗೆ ಗಮನಾರ್ಹ ವಿಷಕಾರಕ ಹಸಿರುಮನೆ ಅನಿಲಗಳ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಮರುಬಳಕೆ ಸೇರಿದಂತೆ ಇತರ ವಿಲೇವಾರಿ ವಿಧಾನಗಳು ಸಹ ಅವುಗಳ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯೊಂದಿಗೆ ಬರುತ್ತವೆ.
ಪ್ಲಾಸ್ಟಿಕ್ ಉದ್ಯಮದ ತ್ವರಿತ ಜಾಗತಿಕ ಬೆಳವಣಿಗೆ, ಹೆಚ್ಚಾಗಿ ನೈಸರ್ಗಿಕ ಅನಿಲದಿಂದ ಉತ್ತೇಜಿಸಲ್ಪಟ್ಟಿದೆ.
ಪರಿಣಾಮ, ಇಂಗಾಲದ ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಹವಾಮಾನ ದುರಂತವನ್ನು ತಡೆಗಟ್ಟುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿದೆ.
ಪರಿಣಾಮ, ಸಾಗರಗಳಲ್ಲಿನ ಪ್ಲಾಸ್ಟಿಕ್ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮತ್ತು ಬೇರ್ಪಡಿಸುವ ಸಾಗರಗಳ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ.
ಹೀಗಾಗಿ ಪ್ಲಾಸ್ಟಿಕ್ ಮಾಲಿನ್ಯವು ಹವಾಮಾನ ಬದಲಾವಣೆಯನ್ನು ವೇಗಗೊಳಿಸಲು ಕೊಡುಗೆ ನೀಡುವ ಮತ್ತೊಂದು ಮಾರ್ಗವನ್ನು ಸೃಷ್ಟಿಸುತ್ತದೆ. ಸಾಗರ ಮತ್ತು ಪರ್ವತ ಪ್ರದೇಶಗಳಂತಹ ವಿವಿಧ ಪರಿಸರ ವ್ಯವಸ್ಥೆಗಳು ನಿರ್ದಿಷ್ಟವಾಗಿ ಹವಾಮಾನ ಬದಲಾವಣೆ ಮತ್ತು ಪ್ಲಾಸ್ಟಿಕ್ ಮಾಲಿನ್ಯ ಎರಡಕ್ಕೂ ಗುರಿಯಾಗುತ್ತವೆ.
ಮೈಕ್ರೋಪ್ಲಾಸ್ಟಿಕ್‌ಗಳು ನಾವು ಉಸಿರಾಡುವ ಗಾಳಿಯಲ್ಲಿ ಮತ್ತು ಭೂಮಿಯ ವಾತಾವರಣದಲ್ಲಿವೆ ಮತ್ತು ಅವು ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ
ಮೈಕ್ರೊಪ್ಲಾಸ್ಟಿಕ್‌ಗಳು ಭೂಮಿಯಲ್ಲಿ, ಸಾಗರದಲ್ಲಿ ಮತ್ತು ನಮ್ಮ ಆಹಾರದಲ್ಲಿ ಕಂಡುಬರುತ್ತವೆ. ಈಗ ಪ್ರಪಂಚದಾದ್ಯಂತದ ಹಲವಾರು ಅಧ್ಯಯನಗಳು ನಾವು ಉಸಿರಾಡುವ ಗಾಳಿಯಲ್ಲಿಯೂ ಇವೆ ಎಂದು ದೃಢಪಡಿಸಿವೆ.
ಇತರ ವಿಧದ ವಾಯುಗಾಮಿ ಕಣಗಳು (ಏರೋಸಾಲ್‌ಗಳು) ಧೂಳು, ಸಮುದ್ರ ಸ್ಪ್ರೇ ಮತ್ತು ಮಸಿ ಸೂರ್ಯನ ಬೆಳಕನ್ನು ಚದುರಿಸುತ್ತವೆ ಅಥವಾ ಹೀರಿಕೊಳ್ಳುತ್ತವೆ, ಮತ್ತು ಪರಿಣಾಮವಾಗಿ ಅವು ಹವಾಮಾನ ವ್ಯವಸ್ಥೆಯನ್ನು ತಂಪಾಗಿಸುತ್ತವೆ ಅಥವಾ ಬೆಚ್ಚಗಾಗಿಸುತ್ತವೆ. ಮೈಕ್ರೋಪ್ಲಾಸ್ಟಿಕ್ ಎರಡನ್ನೂ ಮಾಡುವುದನ್ನು ನಾವು ಕಂಡುಕೊಂಡಿದ್ದೇವೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಪರಿಹರಿಸಲು ನಾವು ಕ್ರಮ ಕೈಗೊಳ್ಳದ ಹೊರತು ಮೈಕ್ರೋಪ್ಲಾಸ್ಟಿಕ್‌ಗಳು ಭೂಮಿಯ ಹವಾಮಾನ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
***
ಇದಿಷ್ಟು ಅಂತರ್ಜಾಲ ಮತ್ತು ಇತರೆಡೆಯಿಂದ ಸಂಗ್ರಹಿಸಿದ ಅಧಿಕೃತ ಮಾಹಿತಿಗಳು.
ನೆಟ್ಟ ಅಡಿಕೆ ಗಿಡಗಳು ಸುಡುತ್ತಿರುವುದಕ್ಕೆ, ವಾತಾವರಣದ ತೇವಾಂಶ ಅಲ್ಲೋಲ-ಕಲ್ಲೋಲವಾಗಿ ಅಡಿಕೆಯೂ ಸೇರಿದಂತೆ ಸಸ್ಯಾದಿಗಳಿಗೆ ರೋಗಗಳು ಹೆಚ್ಚುತ್ತಿರುವುದಕ್ಕೆ, ಎಲ್ಲ ಜೀವ ಜಾಲದ ಚಕ್ರದ ಮೇಲೆ ಉಂಟಾಗುತ್ತಿರುವ ಭೀಕರ ಪರಿಣಾಮಕ್ಕೆ, ನೆಟ್ಟಿ ಮಾಡಿದ ಗದ್ದೆಯಲ್ಲಿ ನಿಲ್ಲಿಸಿದ ನೀರು ಮಾಯ ವಾಗುತ್ತಿರುವುದಕ್ಕೆ, ನಾಳೆ ಆಹಾರ ಬೆಳೆಗಳಲ್ಲಿ ಹಾಹಾ ಕಾರ ಉಂಟಾಗುವುದಕ್ಕೆ, ಆಗಷ್ಟ್‌ನಲ್ಲಿ ಮೇ ತಿಂಗಳನ್ನೂ ಮೀರಿಸುವ ಬಿಸಿಲಿಗೆ, ಸಾಧ್ಯವಾದಷ್ಟು ಬಿಸಿಲಿನಲ್ಲಿ ಸಂಚರಿಸದಂತೆ ವೈದ್ಯರೇ ಎಚ್ಚರಿಕೆ ಕೊಡುತ್ತಿರುವುದಕ್ಕೆ, ವಿಚಿತ್ರ ವಾತಾವರಣದಿಂದ ಎಲ್ಲ ಕಡೆ ಶೀತ, ನೆಗಡಿ, ಜ್ವರ ಉಂಟಾಗುತ್ತಿರುವುದಕ್ಕೆ, ಬಿ.ಪಿ., ಸಕ್ಕರೆ, ಗ್ಯಾಸ್ಟಿಕ್, ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚುತ್ತಿರುವುದಕ್ಕೆ......
ನೋ ಡೌಟ್.....
ನಾವೆಲ್ಲ ಬಳಸುತ್ತಿರುವ ಪ್ಲಾಸ್ಟಿಕ್‌ಗಳೂ ಕಾರಣ!!!
ಮತ್ತು ಪ್ಲಾಸ್ಟಿಕ್‌ಗಳೇ ಹೆಚ್ಚು ಕಾರಣ!!!
ಪ್ಲಾಸ್ಟಿಕ್ ಕಣಗಳು..... ನಿರ್ಲಕ್ಷ್ಯದಿಂದ ಬಳಸಿ ಬಿಸಾಡಿದ ಪ್ಲಾಸ್ಟಿಕ್, ರಸ್ತೆ ಬದಿ, ತೋಟ, ಗದ್ದೆ, ಹಾಡ್ಯ, ಮಣ್ಣು, ಕೆರೆ, ಬಾವಿ, ನದಿ, ಸಾಗರ, ಗಾಳಿ, ವಾತಾವರಣ ಸೇರಿ..... ನಮ್ಮ ಉದರವನ್ನೇ ಸೇರ್ತಾ ಇದೆ.
ಅದೂ ಭಯಾನಕ ಪಾಯಿಸನ್ ಆಗಿ!!!
ಎಲ್ಲೋ ಬಿಸಾಡಿದ ಚಾಕ್ಲೇಟ್‌ನ ಒಂದು ಸಣ್ಣ ರ‌್ಯಾಪರ್ ಕೋಡ ನೂರಾರು ಜನರ ಉಸಿರಾಟದಲ್ಲಿ ಸಾವಿರಾರು ಪ್ಲಾಸ್ಟಿಕ್ ಕಣಗಳನ್ನು ಸೇರಿಸುತ್ತಿದೆ.
ಸಂಶೋಧನೆಯೇ ಹೇಳುವ ಪ್ರಕಾರ ಮುಂದಿನ ತಲೆಮಾರುಗಳಲ್ಲಿ ಇನ್ನಷ್ಟು ಅಂಗವಿಕಲ ಮಕ್ಕಳು ಹುಟ್ಟುತ್ತಾರೆ, ಬುದ್ದಿ ಮಾಂದ್ಯತೆ ಹೆಚ್ಚಾಗಲಿದೆ, ಸಾವಿನ ವಯಸ್ಸು ಹಿಂದಕ್ಕೆ ಬರಲಿದೆ, ಬದುಕು ನಿರಂತರ ಔಷಧಿಯ ಮೇಲೆ ನಿಲ್ಲುವಂತಾಗುತ್ತದೆ. ಮತ್ತು ಇವೆಲ್ಲ ಇನ್ನು ಮುಂದೆ ಪಕ್ಕದ ಮನೆಯವರಿಗೆ ಆಗುವುದಲ್ಲ!!!!
ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡೋಣ. ಬಳಸಿದ ಪ್ಲಾಸ್ಟಿಕ್‌ನ್ನು ವೈಜ್ಞಾನಿಕ ವಿಲೇವಾರಿ ಮಾಡೋಣ.
ಪ್ಲಾಸ್ಟಿಕ್ ಸುಟ್ಟು ಖಾಲಿ ಮಾಡಿದರೆ, ಸುಟ್ಟ ಪ್ಲಾಸ್ಟಿಕ್‌ನ ಕಣಗಳು, ಸುಟ್ಟವರ ಮನೆಯ ಸುತ್ತಮುತ್ತಲೇ ಸಂಚರಿಸುತ್ತ, ಸುಟ್ಟವರ ಮನೆಯ ಮಂದಿಯ ಹೊಟ್ಟಗೇ ಸೇರಲಿದೆ.
ಪರಿಣಾಮ ಅನಾರೋಗ್ಯ, ಅಕಾಲಿಕ ಮರಣ, ಅಂಗವೈಕಲ್ಯಕ್ಕೆ ನಾಂದಿ ಆಗಲಿವೆ.
ತಮಾಷೆ ಅಂದರೆ ಅಕಾಲಿಕವಾಗಿ ಸತ್ತವರ ಮನೆಯ ವೈಕುಂಠ ಸಮಾರಾಧನೆಯಲ್ಲೂ ಮಧ್ಯಾಹ್ನ ಊಟಕ್ಕೆ ತಾಂಬೂಲ, ಅರಿಶಿನ ಕುಂಕುಮ, ಅಪ್ಪೆಮಿಡಿ ಸಾರು, ಕುಡಿಯುವ ಜೀವ ಜಲವನ್ನೂ ವಿಷಕಾರಿ ಪ್ಲಾಸ್ಟಿಕ್‌ನಲ್ಲಿ ಕೊಡಲಾಗುತ್ತದೆ!!
ದೀರ್ಘಾಯುಷ್ಮಾನ್ ಭವ ಅಂತ ಹಾರೈಸಿ ಬರುವ ನಾಮಕರಣದ/ ಹುಟ್ಟು ಹಬ್ಬದ ಮನೆಯಲ್ಲೂ ಪ್ಲಾಸ್ಟಿಕ್‌ನ ವಿಷಕಾರಿ ವಸ್ತುಗಳನ್ನೇ ಗಿಫ್ಟ್ ಕೊಟ್ಟು ಬರುತ್ತೇವೆ
ಪ್ಲಾಸ್ಟಿಕ್‌ನ್ನು ಕಮ್ಮಿ ಮಾಡುವ ಪ್ರಯತ್ನ ಮಾಡೋಣವಾ!!?
ಪ್ಲಾಸ್ಟಿಕ್‌ಗಳು ರಸ್ತೆ ಬದಿ, ತೋಟ, ಗದ್ದೆ, ಹಾಡ್ಯ, ಮಣ್ಣು, ಕೆರೆ, ಬಾವಿ, ನದಿ, ಸಾಗರ, ಗಾಳಿ, ವಾತಾವರಣ ಸೇರದಂತೆ ಶಕ್ತಿ ಮೀರಿ ಪ್ರಯತ್ನಿಸೋಣ. ಒಂದು ಚಿಟಿಕೆ ಹೊಡೆದು, ಪ್ಲಾಸ್ಟಿಕ್ ಬಳಿಕೆ ಕಮ್ಮಿ ಮಾಡುವುದನ್ನು ಛಾಲೆಂಜ್ ಆಗಿ ತಗೊಳೋಣ.
- ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ