ಸ್ವಸ್ಥ ಸಮಾಜದ ನಿರ್ಮಾಣ ಯುವ ಸಮುದಾಯದಿಂದ ಸಾಧ್ಯ: ಸೋನಿಯಾ ವರ್ಮಾ

Upayuktha
0


ಉಜಿರೆ: ಯುವ ವಿದ್ಯಾರ್ಥಿ ಸಮುದಾಯವು ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಮರ್ಥರಾಗಬೇಕು. ಶಿಕ್ಷಣದೊಂದಿಗೆ ಜ್ಞಾನ ಹಾಗೂ ಮೌಲ್ಯಗಳು ಅತಿ ಅಗತ್ಯವಾಗಿವೆ. ಯುವಕರು ಧೈರ್ಯ ಹಾಗೂ ಶಕ್ತಿಗಳನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಒಟ್ಟಾರೆ ಸ್ವಸ್ಥ ಸಮಾಜದ ನಿರ್ಮಾಣ ಯುವ ಸಮುದಾಯದಿಂದ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಲಾ ಕೇಂದ್ರದ ನಿರ್ದೇಶಕಿ ಸೋನಿಯಾ ವರ್ಮಾ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಹಾಗೂ ರೇಂಜರ್ಸ್ ಸಹಯೋಗದಲ್ಲಿ ಉಜಿರೆಯ ನೀರಚಿಲುಮೆ ಬಳಿಯ ದ.ಕ.ಜಿ.ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಂದು ಪೂರ್ಣ ದಿನದ ಶಿಬಿರ ಉದ್ಘಾಟಸಿ ಮಾತನಾಡಿದರು. 


ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಶಿಬಿರಗಳಿಂದ ಶಾಂತಿ, ಸಹಬಾಳ್ವೆ ಹಾಗೂ ಶ್ರಮದ ಮಹತ್ವ ತಿಳಿಯಲು ಸಾಧ್ಯ. ದೇಶದ ಮುಖ್ಯ ವಾಹಿನಿಗೆ ಯುವಕರ ಕೊಡುಗೆ ಅತಿ ಅಗತ್ಯ ಎಂದು ನುಡಿದರು.


ಶಾಲಾಭಿವದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಅವರು ಶ್ರಮದಾನ ಉದ್ಘಾಟಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ, ಶಾಲಾ ಮುಖೋಪಾಧ್ಯಾಯಿನಿ ಸುಜಾತ ರೈ ಶುಭಾಶಂಸನೆ ಮಾಡಿದರು.


ರಾ.ಸೇ ಯೋಜನೆಯ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಪ್ರಾಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ರೋವರ್ಸ್ ಹಾಗೂ ರೇಂಜರ್ಸ್ ಇದರ ಉಪನ್ಯಾಸಕ ಲೀಡರ್ಸ್ ಅಂಕಿತಾ ಹಾಗೂ ಲಕ್ಷ್ಮೀಶ ಭಟ್ ಉಪಸ್ಥಿತರಿದ್ದರು.


ಎಸ್.ಡಿ.ಎಂ ಸೊಸೈಟಿಯ ತೃಪ್ತ ಜೈನ್, ಶಿಕ್ಷಕಿ ಅನಸೂಯಾ ಹಾಗೂ ಹಿರಿಯ ಸ್ವಯಂ ಸೇವಕ ವಿದ್ಯಾರ್ಥಿ ಶಶಿಧರ ಉಪಸ್ಥಿತರಿದ್ದರು. ಪಲ್ಲವಿ ಸ್ವಾಗತಿಸಿ, ದಕ್ಷಾ ವಂದಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top