ರಾಮಾಯಣ ಹಕ್ಕಿನೋಟ-7: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0



ಶ್ರೀರಾಮಾಯನಮ:

ದಶರಥನು ಮಾಡುತ್ತಿದ್ದ ಪುತ್ರ ಕಾಮೇಷ್ಟಿಯ ಕೊನೆಯ ಹಂತ. ಯಜ್ಞದ ಪೂರ್ಣಾಹುತಿಯಾಯಿತು. ಯಜ್ಞಕುಂಡದಿಂದ ದಿವ್ಯ ತೇಜಸ್ಸಿನ ಪುರುಷನೊಬ್ಬ ಪ್ರತ್ಯಕ್ಷನಾದ. ಆತನ ಕೈಯಲ್ಲಿ ಹೊಳೆಹೊಳೆಯುತ್ತಿದ್ದ ಚಿನ್ನದ ಪಾತ್ರೆಯಿತ್ತು. ಅದನ್ನು ದಶರಥನಿಗೆ ಕೊಡುತ್ತಾ-ದಶರಥ ನಾನು ಪ್ರಜಾಪತಿಯ ಪ್ರತಿನಿಧಿ. ನಿನಗೆ ಮಕ್ಕಳನ್ನು ದಯಪಾಲಿಸುವಂತಹ ದಿವ್ಯವಾದ ಪಾಯಸವು ಇದರಲ್ಲಿದೆ. ಇದನ್ನು ನಿನ್ನ ಮೂವರು ರಾಣಿಯರಿಗೆ ಹಂಚಿ ಪುತ್ರರನ್ನು ಪಡೆ-ಎಂದು ಹೇಳಿ ಅದನ್ನು ದಶರಥನ ಕೈಗಿತ್ತು ಮಾಯವಾದನು. ಇದೇ ಸಂದರ್ಭದಲ್ಲಿ ಮಹಾವಿಷ್ಣುವು ತಾನು ದಶರಥನ ಮಗನಾಗಿ ಹುಟ್ಟುವ ಸಂಕಲ್ಪವನ್ನು ಮಾಡಿದನು.


ತುಂಬಾ ಸಂತಸಗೊಂಡ ದಶರಥನು ಅದನ್ನು ತಾನೇ ಸ್ವತಃ ತನ್ನ ರಾಣಿಯರಿಗೆ ಹಂಚಿದನು. ಹಿರಿಯಳಾದ ಕೌಸಲ್ಯೆಗೆ ಅರ್ಧಭಾಗವನ್ನು ಕೊಟ್ಟನು. ಉಳಿದ ಅರ್ಧವನ್ನು ಮತ್ತೆ ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಸುಮಿತ್ರೆಗೆ ನೀಡಿದನು. ಉಳಿದ ಕಾಲು ಭಾಗವನ್ನು ಮತ್ತೆರಡು ಪಾಲು ಮಾಡಿ ಒಂದು ಭಾಗವನ್ನು ಕೈಕೇಯಿಗೂ ಮತ್ತೊಂದನ್ನು ಸುಮಿತ್ರೆಗೂ ನೀಡಿದನು. ಪರಮ ಹರ್ಷಿತರಾದ ರಾಣಿಯರು ಧನ್ಯತಾ ಭಾವದಿಂದ ಆ ಮಹಾ ಪ್ರಸಾದವನ್ನು ಸ್ವೀಕರಿಸಿದರು.


ಸಂಕಲನ: ವಿಶ್ವ ಉಂಡೆಮನೆ

(ವಿಶ್ವೇಶ್ವರ ಭಟ್ ಉಂಡೆಮನೆ)

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top