ರಾಮಾಯಣ ಹಕ್ಕಿನೋಟ-31: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0

ಶ್ರೀರಾಮಾಯನಮ:



ರಾಮ! ಕಲ್ಯಾಣ ರಾಮ ಹೇಗಾದ?

ಲೋಕದಲ್ಲಿ ಸರ್ವಗುಣ ಸಂಪನ್ನನಾದ ಪುರುಷೋತ್ತಮನಾಗಿ ಹೇಗೆ ಮೂಡಿಬಂದ?


ವಿಶ್ವಾಮಿತ್ರರು ದಾಶರಥಿಯನ್ನು 'ಕೌಸಲ್ಯಾ ಸುಪ್ರಜಾ ರಾಮ..'ಎಂದು ಮಮತೆಯಿಂದ ಯಾಕೆ ಕರೆದರು?.. ಇಂತಹ ಪ್ರಶ್ನೆಗಳು ನನ್ನ ಮುಂದೆ ಎಷ್ಟೋ ಸಮಯದಿಂದಿದ್ದವು.ಕೌಸಲ್ಯೆಯ ವ್ಯಕ್ತಿತ್ವ, ರಾಮನನ್ನು ವನವಾಸಕ್ಕೆ ಕಳುಹಿಸುವ ಸಂದರ್ಭದಲ್ಲಿ ಆಕೆ ನಡೆದುಕೊಂಡ,ಪಾಲಿಸಿದ ಅಪೂರ್ವ ಮಾತೃ-ಸತಿ ಧರ್ಮಪಾಲನೆಗಳ ಕ್ರಮಗಳು ಈ ಪ್ರಶ್ನೆಗಳಿಗೆ ಸಾಕಷ್ಟು ಸಮಾಧಾನಗಳನ್ನು ತಂದುಕೊಟ್ಟವು.


ಮೊದಮೊದಲು ತನ್ನ ಅಸಹಾಯಕತೆಗಳನ್ನು( ಸವತಿ ಕೈಕೇಯಿಯಿಂದ ಸದಾ ನಡೆಯುತ್ತಾ ಬಂದಿರುವ ಶೋಷಣೆ,ಭರತ ಪಟ್ಟವೇರಿದರೆ ಆಗಬಹುದಾದ ಇನ್ನೂ ಹೆಚ್ಚಿನ ಶೋಷಣೆ,ದಶರಥನಿಂದ ಕಡೆಗಣಿಸುವಿಕೆ,ಮಗ ರಾಮನಿಲ್ಲದಿದ್ದರೆ ಆಗಬಹುದಾದ ಅಸಹನೀಯ ದು:ಖ....) ರಾಮನಿಗೆ ಹೇಳುತ್ತಾ 'ನಾನೂ ನಿನ್ನೊಂದಿಗೆ ಬರುತ್ತೇನೆ, ಇಲ್ಲದಿದ್ದರೆ ಪ್ರಾಯೋಪವೇಶ ಮಾಡುತ್ತೇನೆ..'ಮುಂತಾದ ಹೇಳಿಕೆಗಳನ್ನು ಹಿಂದೆಗೆದು ರಾಮನು ಹೇಳಿದ ಸತಿಧರ್ಮ ಪಾಲನೆಗೆ ಸಂಕಟದಿಂದ ಒಪ್ಪಿದಳು.ತತ್ಕ್ಷಣದಿಂದಲೇ ವನವಾಸಕ್ಕೆ ಹೊರಟ ಮಗ ರಾಮನ ಒಳಿತಿಗಾಗಿ ತಾನು ಮಾಡಬಹುದಾದಂತಹ; ಮಾಡಿಸಬಹುದಾದಂತಹ ಶಾಂತಿ ಹವನವೇ ಮೊದಲಾದ ಎಲ್ಲಾ  ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಸಿದಳು.ಪಟ್ಟಾಭಿಷೇಕದ ಹಿತಕ್ಕಾಗಿ ಮಾಡುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳನ್ನು ವನವಾಸದ ಹಿತಕ್ಕಾಗಿ ಮಾರ್ಪಡಿಸಿ ಮಾತೃಸಹಜ ಪ್ರೀತಿಯನ್ನು ತೋರಿದಳು.ರಾಮನ ಮಾತೂ ರಾಮ ಬಾಣವೂ ಎಂದೆಂದೂ ತಪ್ಪುವಂತಹದ್ದಲ್ಲ ಎಂಬುದನ್ನು ಸ್ವತಃ ತಾಯಿಯಾದ ಆಕೆ 'ಹದಿನಾಲ್ಕು ವರ್ಷಗಳ ವನವಾಸದ ಬಳಿಕ ಬಂದು ಪಟ್ಟವೇರಿ ನಿನ್ನ ಆಶೋತ್ತರಗಳನ್ನು ನಡೆಸಿಕೊಡುತ್ತೇನೆ'ಎನ್ನುವ ಏಕೈಕ 'ಊರುಗೋಲಿ'ನಂತಿರುವ ಮಾತನ್ನು ನಂಬಿ ಅವನ ವನವಾಸದ ಯಶಸ್ಸಿಗೆ ಎದೆದುಂಬಿ ಹರಸಿದಳು.ಕೌಸಲ್ಯೆಯ ಅತ್ಯಪೂರ್ವ ವ್ಯಕ್ತಿತ್ವಕ್ಕೆ ಆಕೆ ರಾಮನಿಗೆ ಮಾಡಿದ ಮಂಗಳಕರವಾದ ಶುಭಾಶಂಸನೆಗಳೇ ಸಾಕ್ಷಿ!ಶುಭಾಶಂಸನೆ ಎಂದರೆ ಧನಾತ್ಮಕ ಅಂಶಗಳನ್ನು ಒಳಗೊಂಡಿರುವ ಆಶಯಗಳೇ! ಆದರೆ ಇಲ್ಲಿ ಆಕೆ ಮಾಡಿರುವ ಶುಭಾಶಂಸನೆಯಲ್ಲಿ ಅಶುಭ ಶಕ್ತಿಗಳಿಂದಲೂ ಪುತ್ರ ರಾಮನಿಗೆ ರಕ್ಷಣೆಯೊದಗಲಿ, ಶುಭವಾಗಲಿ ಎಂದಿರುವುದು ಆಕೆಯ ಸ್ವಚ್ಛ ಮನದ ಪ್ರತೀಕವಾಗಿದೆ.....

ವಿಶ್ವ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top