ಮಂಗಳೂರು: ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರಿಗೆ ಉಡುಗೊರೆ ನೀಡಲು ಹಲವಾರು ಆಯ್ಕೆಗಳ ನಡುವೆ, ನಿಮ್ಮ ಸಹೋದರಿಯ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಆರೋಗ್ಯ ಭದ್ರತೆ ಮತ್ತು ಮನಸ್ಸಿನ ಶಾಂತಿಯ ಉಡುಗೊರೆಯನ್ನು ನೀಡಲು ಕೇರ್ ಹೆಲ್ತ್ ಇನ್ಶೂರೆನ್ಸ್ 'ಕೇರ್ ಸುಪ್ರೀಂ ಪ್ಲಾನ್' ಅವಕಾಶ ಕಲ್ಪಿಸಿದೆ.
ಆರೋಗ್ಯ ರಕ್ಷಣೆಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಸಕ್ತ ಜಗತ್ತಿನಲ್ಲಿ, ನಿಮ್ಮ ಸಹೋದರಿಗೆ ಅತ್ಯುನ್ನತ ಆರೋಗ್ಯ ವಿಮಾ ಯೋಜನೆಯನ್ನು ಉಡುಗೊರೆಯಾಗಿ ನೀಡುವುದು ನಿಮ್ಮ ಕಾಳಜಿ, ವಾತ್ಸಲ್ಯ ಮತ್ತು ಚಿಂತನಶೀಲತೆಯನ್ನು ಪ್ರದರ್ಶಿಸುತ್ತದೆ ಎಂದು ಕೇರ್ ಹೆಲ್ತ್ ಇನ್ಶೂರೆನ್ಸ್ ವಿತರಣಾ ವಿಭಾಗದ ಮುಖ್ಯಸ್ಥರಾದ ಅಜಯ್ ಶಾ ಹೇಳಿದ್ದಾರೆ.
ವಿಮಾ ಸುರಕ್ಷೆಯ ವಿಶಾಲ ವ್ಯಾಪ್ತಿಯೊಂದಿಗೆ, ಕೇರ್ ಸುಪ್ರೀಂ ಮೂಲ ವಿಮಾ ಮೊತ್ತದ 7 ಪಟ್ಟು ವಿಸ್ತರಿಸುವ ಕವರೇಜ್ ಅನ್ನು ನೀಡುತ್ತದೆ ಮತ್ತು ಪಾಲಿಸಿ ವರ್ಷದಲ್ಲಿ ನೀವು ಎಷ್ಟು ಬಾರಿ ಕ್ಲೈಮ್ ಮಾಡಿದರೂ ಇದನ್ನು ವಿಸ್ತರಿಸಲಾಗುತ್ತದೆ.
ಅತ್ಯಾಧುನಿಕ ಚಿಕಿತ್ಸೆಗಳ ಜತೆಗೆ ಆಸ್ಪತ್ರೆಗೆ ದಾಖಲು, ಆಸ್ಪತ್ರೆ ಪೂರ್ವ ಮತ್ತು ಆಸ್ಪತ್ರೆ ನಂತರದ ಸೇವೆಗಳು, ಡೇಕೇರ್ ಆರೈಕೆ, ಟೆಲಿ ಸಮಾಲೋಚನೆಗಳು, ಇತರ ಪ್ರಯೋಜನಗಳ ಜೊತೆಗೆ ಆಂಬ್ಯುಲೆನ್ಸ್ ಸೌಲಭ್ಯ ಕೂಡಾ ಲಭ್ಯ. ಇವುಗಳ ಹೊರತಾಗಿ, ನಮ್ಮ 21000 ಕ್ಕೂ ಅಧಿಕ ಆರೋಗ್ಯ ಪೂರೈಕೆದಾರರ ವ್ಯಾಪಕ ಜಾಲದಲ್ಲಿ ನಗದು ರಹಿತ ಚಿಕಿತ್ಸೆಗೆ ಅವಕಾಶವಿದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ