ಪುತ್ತೂರಿನ ಮೊದಲ ಬಿ.ಫಾರ್ಮ ಕಾಲೇಜ್ ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ

Upayuktha
0

ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಸ್ಸೂಟಿಕಲ್ ಸೈನ್ಸ್ ಗೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯ, ನವದೆಹಲಿ ಇವರಿಂದ ಮಾನ್ಯತೆ

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು (ರಿ) ಇದರ ಆಶ್ರಯದಲ್ಲಿ 80ನೇ ಯ ಸಂಸ್ಥೆಯಾಗಿ ಪ್ರಾರಂಭಗೊಳ್ಳಲಿರುವ  ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಸ್ಸೂಟಿಕಲ್ ಸೈನ್ಸ್ ಗೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯ, ನವದೆಹಲಿ ಹಾಗೂ ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ದೊರಕಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ತಿಳಿಸಿದ್ದಾರೆ. 


1965 ರಲ್ಲಿ ವಿವೇಕಾನಂದ ಕಾಲೇಜಿನ ಆರಂಭದೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಯನ್ನು ಆರಂಭಿಸಿದ ವಿವೇಕಾನಂದ ವಿದ್ಯಾಸಂಸ್ಥೆ 2009 ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಎಂದು ಮರು ನಾಮಕರಣಗೊಂಡು ಇದೀಗ 80ನೆಯ ಸಂಸ್ಥೆಯಾಗಿ ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಸ್ಸೂಟಿಕಲ್ ಸೈನ್ಸ್ ಸಂಸ್ಥೆ ಆರಂಭಗೊಳ್ಳಲಿದೆ.  ಇದಕ್ಕೆ ಸಂಬಂಧಿಸಿ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಬೆಂಗಳೂರು ಇದರ ಅಡಿಯಲ್ಲಿ ಪ್ರಾರಂಭಿಸಲು ಕರ್ನಾಟಕ ಸರಕಾರ ಹಾಗೂ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಿಂದ ಅಧಿಕೃತ ಮಾನ್ಯತೆ ದೊರೆತಿದ್ದು ಪ್ರಸಕ್ತ ವರ್ಷದಿಂದ ಬಿ.ಫಾರ್ಮಾ ಕೋರ್ಸುಗಳು ಆರಂಭಗೊಳ್ಳಲಿದೆ.  


ಪುತ್ತೂರಿನ ನೆಹರೂ ನಗರದಲ್ಲಿರುವ ವಿವೇಕಾನಂದ ಕ್ಯಾಂಪಸ್‍ನಲ್ಲಿ ಈಗಾಗಲೇ ಫಾರ್ಮಸಿ ಕಾಲೇಜನ್ನು ಆರಂಭಿಸಲು ಅಗತ್ಯವಿರುವ ಕಟ್ಟಡ, ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ, ಅನುಭವಸ್ಥ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ದಾಖಲಾತಿಯು ಆರಂಭಗೊಂಡಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top