ದೇಶದ ಬೆಳವಣಿಗೆಗೆ ಧನಾತ್ಮಕ ಕೊಡುಗೆ ನೀಡಲು ಪ್ರತಿಜ್ಞೆ ಮಾಡೋಣ: ಸಾರ್ಜೆಂಟ್ ಟೋನಿ ಪಿಂಟೋ

Upayuktha
0


ಮಂಗಳೂರು:
ಯುವ ನಾಗರಿಕರು ಏಕತೆಯನ್ನು ಎತ್ತಿ ಹಿಡಿದು ಪ್ರಗತಿಯತ್ತ ಕೆಲಸ ಮಾಡಬೇಕು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಶಿಕ್ಷಣವನ್ನು ಸಾಧನವನ್ನಾಗಿ ಬೆಳೆಸಿಕೊಳ್ಳೋಣ ದೇಶದ ಬೆಳವಣಿಗೆಗೆ ಧನಾತ್ಮಕ ಕೊಡುಗೆ ನೀಡಲು ಪ್ರತಿಜ್ಞೆ ಮಾಡೋಣ ಎಂದು ಭಾರತೀಯ ನೌಕಾಪಡೆಯ  ನಿವೃತ್ತ ಸಾರ್ಜೆಂಟ್ ಟೋನಿ ಪಿಂಟೋ ನುಡಿದರು. 


ಅವರು ಕೊಟ್ಟಾರದ ಅಬ್ಬಕ್ಕ ನಗರ ಬಡಾವಣೆಯ ನಿವಾಸಿಗಳ ಸಂಘದಿಂದ ಸನ್ಮಾನವನ್ನು ಸ್ವೀಕರಿಸಿದರು. ಇಂದು ನಮ್ಮ ಪ್ರೀತಿಯ ಮಾತೃಭೂಮಿಯನ್ನು ವಿಮೋಚನೆ ಗೊಳಿಸಲು ಪಟ್ಟು ಬಿಡದೆ ಹೋರಾಡಿದ ಅಸಂಖ್ಯಾತ ವೀರ ಚೇತನಗಳನ್ನು ಸ್ಮರಿಸುವ ಅಲ್ಲದೆ ದೇಶವನ್ನು ಹಗಲಿರುಳು ಎನ್ನದೆ ಸದಾ ಕಾಯುತ್ತಿರುವ ಸೈನಿಕರು ನಿಜವಾದ ದೇವರು ಅವರಿಗಾಗಿ ಒಳಿತನ್ನು ಪ್ರಾರ್ಥಿಸೋಣ,  ಎಂದರು. 


ಬಡಾವಣೆಯ ನಿವಾಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತ ನಿರ್ದೇಶಕ ಎಂ ಅರ್ ವಾಸುದೇವ್, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮಾಜಿ ಪ್ರಬಂಧಕ ತುಕಾರಾಂ, ಸಿವಿಲ್ ಇಂಜಿನಿಯರ್ ಎಸ್.ಎನ್ ಭಟ್, ಎಲ್ ಐ ಸಿ ಯ ಸಿ.ವಿ.ಭಟ್ ಸಾರ್ಜೆಂಟ್ ಟೋನಿ ಪಿಂಟೋ ರವರನ್ನು ಸನ್ಮಾನಿಸಿದರು. ಶ್ರೀವತ್ಸ, ಪಿ  .ಎಸ್. ಬಾಳಿಗಾ, ಗಣೇಶ್ ರಾವ್, ಚಂದ್ರಶೇಖರ ರೈ, ನೃತ್ಯ ಗುರು ಪ್ರತಿಮಾ ಶ್ರೀಧರ್, ಸುರೇಂದ್ರ,ಮೊದಲಾದವರು ಉಪಸ್ಥಿತರಿದ್ದರು ಸಂಘಟಕ ಶ್ರೀಧರ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ಆಕಾಶ್ ಎಸ್  ಹೊಳ್ಳ ಸನ್ಮಾನಿತರ ಪರಿಚಯವನ್ನು ಮಾಡಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top