ನಮ್ಮ ಸ್ವಾತಂತ್ರ್ಯ ನಮ್ಮ ಹೆಮ್ಮೆ

Chandrashekhara Kulamarva
0



"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ"

ಆಹಾ...! ಎಂಥಾ ಸೊಗಸಾದ ಮಾತು. ಇಂದಿನ ದಿನ ನಮಗೆಲ್ಲಾ ಅತ್ಯಮೂಲ್ಯವಾದ ದಿನ. ಕಾರಣ ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ತೊಲಗಿದ ದಿನವಾಗಿದೆ. ನಾವಿಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಇಂದಿನ ಈ ಸಂತಸ, ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಅದೆಷ್ಟೋ ವೀರ ಯೋಧರ, ಮಹಾನ್ ಸ್ವಾತಂತ್ರ್ಯ ಹೋರಾಟಗಾರರ, ತ್ಯಾಗ, ಬಲಿದಾನ ಹಾಗೂ ಅವಿರತ ಪರಿಶ್ರಮದ ಫಲ.


ಬ್ರಿಟಿಷರ ಕಪಿಮುಷ್ಟಿಯಿಂದ, ದಾಸ್ಯ ಸಂಕೋಲೆಯಿಂದ, ಭಾರತ ಮಾತೆಯನ್ನು ಮುಕ್ತ ಗೊಳಿಸಿದ ಇವರ ನಿಸ್ವಾರ್ಥ ಸೇವೆ ಶ್ಲಾಘನೀಯವೇ ಸರಿ. ಇತಿಹಾಸದ ಪುಟಗಳಿಂದ ಅವರನ್ನು ಸ್ಮರಿಸುತ್ತಾ ನಾವಿಂದು ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡೋಣ. ನಮ್ಮ ಪೂರ್ವಜರ ಹೋರಾಟದ ಫಲವೇ ಇಂದಿನ ಆಜಾದ್ ಅಮೃತ ಮಹೋತ್ಸವವಾಗಿದೆ.


ಸ್ವಾತಂತ್ರ್ಯವು ಪ್ರತಿಯೊಬ್ಬರ ಮೂಲಭೂತ ಹಕ್ಕು. ಹೀಗಿರುವಾಗ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತುಕೊಂಡು ಅದನ್ನು ಸದುಪಯೋಗಗೊಳಿಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ? ಸದಾ ಜಾಗರೂಕರಾಗಿ ದೇಶ ಸೇವೆ ಮಾಡುವತ್ತ ಹೆಜ್ಜೆ ಇಡೋಣ.


-ಜೈ ಹಿಂದ್ ಜೈ ಭಾರತ್ ಮಾತೆ




ಪ್ರಣಮ್ಯ ಎನ್
10ನೇ ತರಗತಿ
MSCHSS ಪೆರಡಾಲ ನೀರ್ಚಾಲ್
ಕಾಸರಗೋಡು.


إرسال تعليق

0 تعليقات
إرسال تعليق (0)
To Top