ಮುಜುಂಗಾವು ವಿದ್ಯಾಪೀಠದಲ್ಲಿ ಓಣಂ ಹಬ್ಬದ ಆಚರಣೆ

Upayuktha
0


ಕುಂಬಳೆ: ಮುಜುಂಗಾವು ವಿದ್ಯಾಪೀಠದಲ್ಲಿ ಶುಕ್ರವಾರ (ಆ.25) ಎಲ್‌ಕೆಜಿ ಹಂತದಿಂದ ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳು ಕೇರಳದ ಸಾಂಪ್ರದಾಯಿಕ ಉಡುಪಿನೊಂದಿಗೆ ಶಾಲೆಗೆ ಆಗಮಿಸಿದ್ದರು. ಎಲ್ಲಾ ತರಗತಿಯ ಮಕ್ಕಳೂ ಅವರವರ ತರಗತಿಯ ಅಧ್ಯಾಪಕರ ಸಹಕಾರದೊಂದಿಗೆ ಹೂವಿನ ರಂಗವಲ್ಲಿ ಹಾಕಿ, ಪಾಯಸ, ಹೋಳಿಗೆ ಸಹಿತ ಪುಷ್ಕಳ ಭೋಜನ ಮಾಡಿ ಸಂಭ್ರಮಿಸಿದರು.  


ಮುಖ್ಯ ಶಿಕ್ಷಕರಾದ ಶ್ಯಾಂಭಟ್ ದರ್ಭೆಮಾರ್ಗ ಮಕ್ಕಳಿಗೆ ಹಿತವಚನ ಹೇಳಿದರೆ, ಅಧ್ಯಾಪಕ ಬಾಲಕೃಷ್ಣ ಶರ್ಮರು ಕೇರಳದಲ್ಲಿ ಓಣ ಆಚರಿಸುವ ಉದ್ದೇಶ, ಬಲಿಚಕ್ರವರ್ತಿ ಬಲೀಂದ್ರನಾಗಿ ಕೇರಳಕ್ಕೆ ಬರುವುದು, ಕೇರಳದ ಜನತೆ ಆ ದಿನವನ್ನು ಬಲೀಂದ್ರನನ್ನು ಸಂತಸದಿಂದ ಬರಮಾಡಿಕೊಳ್ಳುವುದನ್ನು ಸರಳವಾಗಿ ಹೇಳಿದರು. ಮುಖ್ಯ ಅಧ್ಯಾಪಕರಾದ ಶ್ಯಾಂಭಟ್ ದರ್ಭೆಮಾರ್ಗ ಧನ್ಯವಾದಗಳನ್ನಿತ್ತರು. ವಲಯದ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.


ಮಧ್ಯಾಹ್ನ ಎಲ್ಲರಿಗೂ ಪಾಯಸ, ಭಕ್ಷ್ಯಗಳೊಂದಿಗೆ ಓಣಂ ಭೋಜನ ನೀಡಲಾಯಿತು.


ವರದಿ: ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top