ಇವತ್ತು ನಾಗರಪಂಚಮಿ ಪರ್ವದಿನ. ಯಾವುದಾದರೂ ಬನಕ್ಕೆ ತೆರಳಿ ನಾಗನ ಆರಾಧನೆ ಪೂಜೆ ತನು ಸೇವೆಗಳನ್ನು ಅರ್ಪಿಸುತ್ತೇವೆ. ಆದರೆ ವಾಪಾಸು ಬರಬೇಕಾದರೆ ಬನಗಳಲ್ಲಿ ಯಾವುದೇ ಬಗೆಯ ಪ್ಲಾಸ್ಟಿಕ್ ಗಳನ್ನು, ಬಾಟಲಿ ಅಥವಾ ಇತರೆ ತ್ಯಾಜ್ಯ ವಸ್ತುಗಳನ್ನು ಬನದಲ್ಲಿಯೇ ಬಿಟ್ಟು ಬನದ ಸ್ವಚ್ಛತೆಯನ್ನು ದಯವಿಟ್ಟು ಕೆಡಿಸಬೇಡಿ. ನಾವಲ್ಲದಿದ್ದರೂ ಬೇರೆ ಯಾರಾದರೂ ಬಿಟ್ಟರೂ ಅವರಲ್ಲೂ ಕಸವನ್ನು ತೆಗೆದುಕೊಂಡು ಹೋಗುವಂತೆ ವಿನಂತಿಸಿ. ನಾವೆಲ್ಲರೂ ನಾಗಬನಗಳ ಸ್ವಚ್ಛತೆಯನ್ನು ಕಾಪಾಡುವುದೂ ನಾಗದೇವರ ದೊಡ್ಡ ಸೇವೆಯಾಗುತ್ತದೆ.
- ಜಿ. ವಾಸುದೇವ ಭಟ್, ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ