ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ: ಕೆ.ಪಿ. ಪುತ್ತೂರಾಯ

Upayuktha
0

ವಿದ್ಯಾಗಿರಿ: ‘ಪಿಯುಸಿ ಶಿಕ್ಷಣವು ಬದುಕಿನ ಮಹತ್ವದ ಅಡಿಪಾಯ. ಈ ಹಂತದಲ್ಲಿ ಸಮರ್ಪಕ ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ’ ಎಂದು ವಾಗ್ಮಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪಿ. ಪುತ್ತೂರಾಯ ಹೇಳಿದರು. 


ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾತ್ಮಕ ಕಾರ್ಯಕ್ರಮ- ‘ಸ್ಪೂರ್ತಿ’ಯಲ್ಲಿ ಅವರು ಮಾತನಾಡಿದರು. 


ಪೋಷಕರ ಕನಸನ್ನು ಈಡೇರಿಸುವುದೂ ವಿದ್ಯಾರ್ಥಿಗಳ ಕನಸಾಗಬೇಕು. ಪಠ್ಯದ ಜೊತೆ ಅನುಭವವೂ ನಮಗೆ ಶಿಕ್ಷಣ ನೀಡುತ್ತದೆ. ಅನುಭವವೂ ಒಳ್ಳೆಯ ಗುರು. ವಿದ್ಯಾರ್ಥಿ ಜೀವನವು ನಮ್ಮನ್ನು ಮಾನವನಾಗಿ ಪರಿವರ್ತಿಸುತ್ತದೆ ಎಂದರು. 


‘ಯಶಸ್ಸಿಗೆ ಬೌದ್ಧಿಕ ಪ್ರಗತಿ ಅವಶ್ಯ. ಶಿಕ್ಷಣಕ್ಕೆ ಜಾತಿ ಇಲ್ಲ. ಜಾತಿಗೂ ಜ್ಞಾನಕ್ಕೂ ಸಂಬಂಧವಿಲ್ಲ. ಎಲ್ಲರೂ ಜ್ಞಾನ ಪಡೆಯಲು ಅರ್ಹರು. ಆದರೆ, ಕಲಿಕೆಯ ಹಸಿವು ಇರಬೇಕು. ಅದು ವ್ಯಕ್ತಿತ್ವ ವಿಕಸನಕ್ಕೂ ರಹದಾರಿಯಾಗುತ್ತದೆ’ ಎಂದರು. 


ಪ್ರಾಂಶುಪಾಲ ಪ್ರೊ. ಎಂ ಸದಾಕತ್, ಉಪ ಪ್ರಾಂಶುಪಾಲೆ ಜಾನ್ಸಿ,  ವಿವಿಧ ವಿಭಾಗಗಳ ಸಂಯೋಜಕರು ಹಾಗೂ ಡೀನ್‍ಗಳು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top