
ಅಮ್ಮಾ... ಆಹಾ! ಎಂಥ ಸೊಗಸಾದ ಪದ. ಅಮ್ಮ ಅನ್ನುವ ಪದವನ್ನು ಕೇಳುವಾಗಲೇ ಮನಸ್ಸಿಗೆ ಏನೋ ಒಂದು ಸುಖ, ಸಂತೋಷ, ಹಾಗೂ ನೆಮ್ಮದಿಯ ಭಾವನೆ. ಅಮ್ಮನೊಂದಿಗೆ ಇದ್ದಾಗ ಎಲ್ಲಾ ಕಷ್ಟಗಳನ್ನು ಮರೆಯಲು ಸಾಧ್ಯವಾಗುವುದು. ಅಮ್ಮ ಅಂದರೆ ದೇವರ ಸಮಾನ. ಅವಳು ಕುಟುಂಬದಲ್ಲಿಯೂ, ಸಾಮಾಜಿಕ ರಂಗದಲ್ಲಿಯೂ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ.
ಅಮ್ಮನಿಗೆ ಮಹತ್ವದ ಸ್ಥಾನವಿದೆ. ಅಮ್ಮ ಗುರುವೂ ಹೌದು, ಗೆಳತಿಯೂ ಹೌದು. ಅಮ್ಮ ಎಲ್ಲರ ಸ್ಥಾನವನ್ನು ತುಂಬಬಹುದು ಆದರೆ ಅಮ್ಮನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಸಾವಿರ ಜನ್ಮ ಹುಟ್ಟಿ ಬಂದರೂ ಸಾಸಿವೆ ಕಾಳಷ್ಟೂ ತೀರಿಸಲಾಗದು ಅಮ್ಮನ ಋಣ.
ಕೊನೆಯವರೆಗೂ ಬದಲಾಗದ ಪ್ರೀತಿ ಅಮ್ಮನದ್ದು. ತನಗಾಗಿ ಎಂದೂ ಬೇಡಿಕೊಳ್ಳದೆ ತನ್ನ ಮಕ್ಕಳಿಗಾಗಿ ಬೇಡಿಕೊಳ್ಳುವ ಸ್ವಾರ್ಥವಿಲ್ಲದ ಜೀವವೇ ಅಮ್ಮ. ಅಮ್ಮನಿಗೆ ಮಗುವೇ ಸರ್ವಸ್ವ, ಮಗುವಿಗಾಗಿ ಅವಳು ಏನೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತಾಳೆ.
- ಪ್ರಣಮ್ಯ ಎನ್
10ನೇ ತರಗತಿ,
ಎಂಎಸ್‌ಸಿಎಚ್‌ಎಸ್ ಪೆರಡಾಲ, ನೀರ್ಚಾಲು,
ಕಾಸರಗೋಡು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ