ಮಂಗಳೂರು: "ಮಂಗಳೂರು ಸ್ಪೂರ್ತಿ" ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ (23-24ನೇ ಸಾಲಿಗೆ) ಪದಗ್ರಹಣ ಸಮಾರಂಭವು ಜುಲೈ 23ರಂದು ಮಲ್ಲಿಕಟ್ಟೆಯ ಶಿವಭಾಗ್, ಜ್ಯೂಸ್ ಫಿಟ್ನೆಸ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಲಯನ್ ಡಾ.ನಿತಿನ್ ಆಚಾರ್ಯ, ಕಾರ್ಯದರ್ಶಿ ಲಯನ್ ಮಂಜುನಾಥ್ ಜಿ, ಖಜಾಂಚಿ ಲಯನ್ ಫ್ಲೇವಿಯನ್ ಡಿಸೋಜ ಹಾಗೂ ಇತರ ಪದಾಧಿಕಾರಿಗಳು ಸ್ಥಾಪಕ ಪ್ರಥಮ ಉಪಾಧ್ಯಕ್ಷ ಲಯನ್ ಭಾರತಿ ಬಿ.ಎಂ.ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಪ್ರದೇಶ ಮತ್ತು ವಲಯದ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಮಾರಂಭದಲ್ಲಿ ಚಾರ್ಟರ್ಡ್ ಅಧ್ಯಕ್ಷೆ ಲಯನ್ ಜ್ಯೋತಿ ಜಗದೀಶ್, ವಲಯ ಅಧ್ಯಕ್ಷೆ ಲಯನ್ ಲಿನೆಟ್ ಡಿಸೋಜಾ ಮತ್ತು ಪ್ರಾಂತ ಅಧ್ಯಕ್ಷ ಲಯನ್ ಜಯಪ್ರಕಾಶ ರೈ ಅವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ