ಮಂಗಳೂರು: 'ಭಾರತೀಯ ಸೇನೆಯ ಸೇವೆಯಲ್ಲಿ ದೊರೆಯುವ ಅವಕಾಶ, ಗೌರವ, ಸವಲತ್ತುಗಳು ಬೇರೆ ಯಾವ ವೃತ್ತಿಯಲ್ಲೂ ದೊರೆಯಲು ಸಾಧ್ಯವಿಲ್ಲ. ಹೊಸ ತಲೆಮಾರಿನ ಯುವಕರಿಗೆ ಸೇನೆಯಲ್ಲಿ ಬೆಳೆಯಲು ವಿಪುಲವಾದ ದಾರಿಗಳಿವೆ. SSLC, PUC ಅಥವಾ ಇನ್ನಾವುದೇ ಪದವಿ ಬಳಿಕವು ಕೂಡ ವಿದ್ಯಾರ್ಥಿಗಳು ಸೇನೆಗೆ ಸೇರಬಹುದು. ಈ ಬಗ್ಗೆ ಹೆತ್ತವರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಬಹುದು' ಎಂದು ಭಾರತೀಯ ನೌಕಾ ಸೇನೆಯ ಪೂರ್ವ ಪೆಟ್ಟಿ ಅಫೀಸರ್ ಸುಧೀರ್ ಪೈ ಹೇಳಿದರು.
ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಶ್ರುತ ಅಕಾಡೆಮಿ ಹಮ್ಮಿಕೊಂಡ NDA ಮತ್ತು ALLIED ಸಂಬಂಧೀ ಪರೀಕ್ಷೆಗಳ ಕುರಿತ ಸೆಮಿನಾರ್ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿ ಯಾಗಿ ಸವಿಸ್ತಾರವಾಗಿ ಭಾರತೀಯ ಸೇನೆಯ ಕುರಿತು ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಭಾರತೀಯ ನೌಕ ಸೇನೆಯ ಕಮಾಂಡರ್ ಶ್ರೀ ಕ್ಲಾಡ್ ಲೋಬೊ ಅವರು ಮಾತನಾಡಿ ವಿದ್ಯಾರ್ಥಿಗಳು ಸೇನೆಗೆ ಸೇರುವ ಕುರಿತು ಗಂಭೀರ ಚಿಂತನೆ ನಡೆಸುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ, ಪ್ರಖ್ಯಾತ ಜೋತಿಷಿ ಮಧುಕರ ಭಾಗವತ್ ಮಾತನಾಡಿ, ತಮ್ಮ ಜೀವನದಲ್ಲಿ ಸೇನೆ ಹೇಗೆ ಶಿಸ್ತನ್ನು ರೂಢಿಸಿತು, ತಾನು ಹೇಗೆ ಅಲ್ಲಿ ಹೊಸ ತಾಂತ್ರಿಕತೆಯನ್ನು ಕಲಿತೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಈ ಮೂವರೂ ಸೇನಾಸಾಧಕರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಜುಲೈ 29ರಂದು ನಡೆದ ಈ ಕಾರ್ಯಾಗಾರದಲ್ಲಿ ಸ್ಥಾಪಕ ಡಾ. ಶ್ರುತಕೀರ್ತಿರಾಜ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರೆ ಉಪನ್ಯಾಸಕ ಪದ್ಮನಾಭ ವಂದಿಸಿದರು, ಉಪನ್ಯಾಸಕ ರಮೇಶ ಕೆ.ಜಿ ಅತಿಥಿಗಳನ್ನು ಪರಿಚಯಿಸಿ ಶ್ಲಾಘನ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 100 ಶಿಬಿರಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸೇನೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ರುತ ಅಕಾಡೆಮಿ ತರಬೇತಿ ನೀಡುತ್ತದೆ. ಆಸಕ್ತರು ಈ ಸಂಸ್ಥೆಯನ್ನು (9448502994) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ