ಮಂಗಳೂರು: ಥಂಡರ್ ಕಿಡ್ಸ್ ತಂಡದ ಮಕ್ಕಳ ಹಾಡುಗಳ ಬಿಡುಗಡೆ

Upayuktha
0


ಮಂಗಳೂರು:
ಮಕ್ಕಳನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ತಿಕವಾಗಿ  ಕಟ್ಟುವ ಕೆಲಸ ಇಂದು ಅಗತ್ಯವಾಗಿ ಆಗಬೇಕಾಗಿದೆ. ನಮ್ಮ ಮಣ್ಣಿನ,ನಮ್ಮ ನೆಲದ ಗುಣಗಳನ್ನು ಮಕ್ಕಳು ಆವಾಹಿಸಿಕೊಂಡಾಗಲೇ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಉಂಟಾಗಿ ಬದುಕನ್ನು ಪ್ರೀತಿಸುವ ಕಲೆ ಸಿದ್ಧಿಸುತ್ತದೆ ಎಂದು ಕರಾವಳಿ ಲೇಖಕಿಯರ ವಾಚಿಕೆಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು ಅಭಿಪ್ರಾಯ ಪಟ್ಟರು.


ಅವರು ಎಲ್ಲೂರು ಶ್ರೀನಿವಾಸ್ ರಾವ್ ಸಂಗೀತ ನಿರ್ದೇಶನದ  ಥಂಡರ್ ಕಿಡ್ಸ್ ತಂಡದ ಮಕ್ಕಳು ಹಾಡಿದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಮಾತನಾಡುತ್ತಿದ್ದರು.

ಅವರು ಇದೇ ಸಂದರ್ಭದಲ್ಲಿ ಕುಶಾಲಾಕ್ಷಿ  ವಿ ಕುಲಾಲ್ ಕಣ್ವತೀರ್ಥ ಅವರ “ ತಗೊರಿ ಮಿತ್ತ್ ದ ಮಣ್ಣ್ “ ತುಳು ಅನುವಾದಿತ ಕವನಗಳ ಸಂಕಲನವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಥಂಡರ್  ಕಿಡ್ಸ್ ನ  ಮಕ್ಕಳಿಗೆ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ  ಪ್ರೊ.ಪಿ.ಕೃಷ್ಣಮೂರ್ತಿಯವರು ಮಕ್ಕಳ ಪ್ರತಿಭೆಗೆ ವೇದಿಕೆಯಾಗಲಿರುವ  “ಸುರವಂದಿತ” ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿ - “ ಬರಹಗಾರರು ಸಂಗೀತಗಾರರು ಒಟ್ಟಾದರೆ ಜನ ಮನಕ್ಕೆ ಹಿತವಾಗುವ ಸಾಹಿತ್ಯವನ್ನು ತಲುಪಿಸಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಎಲ್ಲೂರು ಶ್ರೀನಿವಾಸರಾಯರು ಬಹಳ ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.


ಈ ಕಾರ್ಯಕ್ರಮದಲ್ಲಿ ಮಕ್ಕಳ ವಾದ್ಯಗೋಷ್ಠಿಯು ನೆರವೇರಿತು. ಮಕ್ಕಳಾದ  ಕು. ಆದ್ಯ ತಬಲದಲ್ಲಿ,    ಸ್ವಸ್ತಿಕ್,  ಅಕ್ಷಜ್,  ವಿನಮ್ರ ಇಡ್ಕಿದು ಕೀಬೋರ್ಡಿನಲ್ಲಿ ,  ಸಚಿನ್ ಕೊಳಲು,  ಐಶ್ವರ್ಯ ವೀಣೆ, ಶಾಹಿಲ್ ರಿದಂ ಪ್ಯಾಡ್,  ಅರ್ಮನ್ ಸ್ಯಾಕ್ಸೋಫೋನಿನಲ್ಲಿ ಸಹಕರಿಸಿದರು.


ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್, ತಂಡದ ಕಾರ್ಯದರ್ಶಿ ರಘು ಇಡ್ಕಿದು,   ತಂಡದ ಸಂಪರ್ಕಾಧಿಕಾರಿ ಶ್ರೀಮತಿ ಶ್ರೀಮತಿ ಕವಿತಾ,  ಕಾರ್ಯಕಾರಿ ಸಮಿತಿ ಸದಸ್ಯೆ ಜಯಶ್ರೀ ಭಟ್,  ಮತ್ತು ಮಕ್ಕಳ ವಿಭಾಗದ ಮಾ. ಸ್ವಸ್ತಿಕ್ ಭಟ್, ಉಪಸ್ಥಿತರಿದ್ದರು 


ಎಲ್ಲೂರು ಶ್ರೀನಿವಾಸರಾವ್ ಸ್ವಾಗತಿಸಿ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಸಂಚಲಿ ಪ್ರಾರ್ಥಿಸಿದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಕವಿತಾ ಧನ್ಯವಾದ ಅರ್ಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top