ಮಂಗಳೂರು: ದೈನಂದಿನ ಬದುಕಿನಲ್ಲಿ ತಂತ್ರಜ್ಞಾನದ ಮಹತ್ವವನ್ನು ಮನಗಂಡು ಮಂಗಳೂರಿನ ಫಿಜಾ ಬೈ ನೆಕ್ಸ್ ತನ್ನ ಮೊಟ್ಟಮೊದಲ ಟೆಕ್ಸ್ಟಿನೇಶನ್ ಎಂಬ ವಿನೂತನ ಅಭಿಯಾನ ಘೋಷಿಸಿದೆ.
ಈ ವಿನೂತನ ಟೆಕ್ ಫೆಸ್ಟ್ ಮಂಗಳವಾರ ಆರಂಭವಾಗಿದ್ದು, ಈ ತಿಂಗಳ 20ರವರೆಗೆ ಮುಂದುವರಿಯಲಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಅತ್ಯುತ್ತಮ ಡೀಲ್‍ಗಳನ್ನು ನೀಡುವ ಟೆಕ್ ಫೆಸ್ಟ್ ಆಗಿದೆ. ಇದರ ಪಾಲುದಾರರು ಮಾರಾಟದ ಅವಧಿಯಲ್ಲಿ ವಿಶೇಷ ಡೀಲ್‍ಗಳು ಮತ್ತು ರಿಯಾಯಿತಿಗಳನ್ನು ಪಡೆಯುತ್ತಾರೆ.
ರಿಲಯನ್ಸ್ ಡಿಜಿಟಲ್, ಪೂರ್ವಿಕಾ ಮೊಬೈಲ್ಸ್, ಸಂಗೀತಾ ಮತ್ತು ಮಾಪ್ಲೆಯಂಥ ಉನ್ನತ ತಂತ್ರಜ್ಞಾನದ ಬ್ರ್ಯಾಂಡ್‍ಗಳು ಬೆರಗಾಗಿಸುವಂಥ ಕೊಡುಗೆಗಳನ್ನು ನೀಡುತ್ತಿವೆ. ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ 80 ಸಾವಿರಕ್ಕೂ ಮಿಕ್ಕಿದ ಎಲೆಕ್ಟ್ರಾನಿಕ್ ಉತ್ಪನ್ನ ಖರೀದಿಗೆ 10 ಗ್ರಾಂ ಹಾಗೂ 50 ಸಾವಿರಕ್ಕೂ ಮೇಲಿನ ಖರೀದಿಗೆ 5 ಗ್ರಾಂ ಬೆಳ್ಳಿ ನಾಣ್ಯಗಳ ವಿಶೇಷ ಖಚಿತ ಉಡುಗೊರೆ ನೀಡಲಿದೆ.
30 ಸಾವಿರಕ್ಕಿಂತ ಹೆಚ್ಚಿನ ಶಾಪಿಂಗ್ ಮಾಡಿದವರು ಉಚಿತ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳ ಹೆಚ್ಚುವರಿ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ