ಮಂಗಳೂರು: ಸಾಹಿತಿ, ಜ್ಯೋತಿಷಿ ಹೆಚ್. ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ

Upayuktha
0

 


ಮಂಗಳೂರು: ಮಂಗಳೂರಿನ ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ ಗಾಯಕ ಸಂಘಟಕ ಹಾಗೂ  ಚಿತ್ರ ನಿರ್ದೇಶಕ ಎಚ್  ಭೀಮರಾವ್ ವಾಷ್ಠರ್ ರಿಗೆ ಅವರ ಹಲವಾರು ವರ್ಷಗಳಿಂದ ಮಾಡಿದ ವಿವಿಧ ಸಾಧನೆಗಳನ್ನು ಪರಿಗಣಿಸಿ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 


ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಇದರ ಮುಖ್ಯಸ್ಥ ಸತೀಶ್ ಮೆನನ್ ಅವರು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿ ಗೌರವಿಸಿದರು.  ಈ ಸಂದರ್ಭದಲ್ಲಿ  ಹರೇಕಳ ಹಾಜಬ್ಬ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮಣ್ , ನಿರೂಪಕ ಪ್ರಜ್ವಲ್  ಕಾಂತಾರ ಚಿತ್ರ ಖ್ಯಾತಿಯ ನವೀನ್ ಬೋಂದೆಲ್, ಸಮಾಜ ಸೇವಕ ಮಿತ್ರದೇವ ಮಡಪ್ಪಾಡಿ , ಖ್ಯಾತ ಹಾಸ್ಯ ಭಾಷಣಕಾರ್ತಿ ಕವಿತಾ  ಸುಧೀಂದ್ರ ಇನ್ನಿತರ ನಟ ನಟಿ ಗಾಯಕರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top