ಮಂಗಳೂರು: ತಂತ್ರ ಮತ್ತು ಕೌಶಲ್ಯಗಳು, ಬಣ್ಣಗಳೊಂದಿಗೆ ಸೇರಿ ಮನಸ್ಸುಗಳು ಬೆಸೆಯುವ ಜಗತ್ತಿನಲ್ಲಿ ಮಕ್ಕಳು ಪಯಣಿಸಲು ಅವಕಾಶ ನೀಡುವ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವ, ಭಾವನೆಗಳನ್ನು ಬಿಂಬಿಸುವ ಪ್ರಯತ್ನವಾಗಿ ಫಿಜಾ ಬೈ ನೆಕ್ಸಸ್ ಮಾಲ್‍ಚಅತ್ಯಾಕರ್ಷಕ ರೂಬಿಕ್ ಕ್ಯೂಬ್ ಚಾಂಪಿಯನ್‍ಶಿಪ್‍ನ ಎರಡನೇ ಆವೃತ್ತಿಯನ್ನು ಈ ತಿಂಗಳ 19 ಮತ್ತು 20ರಂದು ನಡೆಸುತ್ತಿದೆ.
"ಸ್ಪೀಡ್ ಕ್ಯೂಬಿಂಗ್ ಬೆಂಗಳೂರು" ನ ಸಹಯೋಗದೊಂದಿಗೆ, ನಡೆಯಲಿರುವ ಈ ಕಾರ್ಯಕ್ರಮ ವಿನೋದ ಮತ್ತು ಸವಾಲಿನ ಚಟುವಟಿಕೆಯೊಂದಿಗೆ ಭಾಗವಹಿಸುವವರಲ್ಲಿ ಸಮಸ್ಯೆ ಪರಿಹಾರ, ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಭಾಗವಹಿಸುವವರು 3/3, 2/2 ಮತ್ತು ಇನ್ನೂ ಹೆಚ್ಚಿನ ವಿಭಾಗಗಳ ಅಡಿಯಲ್ಲಿ ಸ್ಪರ್ಧಿಸಲಿದ್ದಾರೆ. ನೀವು ಈವರೆಗೆ ಕ್ಯೂಬ್ ಸಾಲ್ವ್ ಮಾಡಿದ ಹಿನ್ನೆಲೆ ಹೊಂದಿರುವ ಹಾಲಿ ಚಾಂಪಿಯನ್ ಆಗಿದ್ದರೆ ಅಥವಾ ಮೊದಲ ಬಾರಿ ಸವಾಲನ್ನು ಜಯಿಸುವ ಉತ್ಸುಕತೆಯಲ್ಲಿದ್ದರೆ, ಈ ಅದ್ಭುತ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಭಾಗವಹಿಸಲು ಆಸಕ್ತಿಯುಳ್ಳವರು ಆನ್‍ಲೈನ್‍ನಲ್ಲಿ https://www.thecubestore.in/product/mangalore-cube-open-august-2023/ ಅಥವಾ ವಾಟ್ಸಪ್7702889846 ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.
ನೋಂದಣಿ ಲಿಂಕ್:https://www.thecubestore.in/product/mangalore-cube-open-august-2023/ಅಥವಾ ವಾಟ್ಸಪ್ 7702889846.--
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ