ಕಾಸರಗೋಡು: ಮಂಗಳೂರಿನ ಮರಿಯಾ ಜಯಂತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತು ದ.ಕ ಜಿಲ್ಲೆ ಸಂಸ್ಥೆಯ ವತಿಯಿಂದ ಭಾವೈಕ್ಯ ಸಮ್ಮಿಲನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭೀಮರಾವ್ ವಾಷ್ಠರ್ ಅವರು ರಚಿಸಿ ಹಾಡಿರುವ ಭಾವೈಕತೆ ಸಾರುವ ಗೀತೆಯನ್ನು ಕೇಳಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ದಾಖಲೆಯ 100 ಕವಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಎಲ್ಲಾ ಸಾಹಿತಿಗಳು ಸೊಗಸಾಗಿ ಅವರವರ ಸ್ವರಚಿತ ಕವನಗಳನ್ನು ವಾಚಿಸಿ ಮೆಚ್ಚುಗೆಗೆ ಪಾತ್ರರಾದರು.
ಈ ಕಾವ್ಯಮಯ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು ಸಹಿತ ಭಾಗವಹಿಸಿದ ಕವಿ ಹಾಗೂ ಕವಿಯತ್ರಿಯರಿಗೆ ಭಾವೈಕ್ಯ ಸಮ್ಮಿಲನ "ಕಾವ್ಯ ಸಿರಿ" ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಖ್ಯಾತ ಸಾಹಿತಿ ಭೀಮರಾವ್ ವಾಷ್ಠರ್ ಅವರು ರಚಿಸಿ ಹಾಡಿರುವ ಹಾಡಿನ ಧ್ವನಿ ಮುದ್ರಣ ಸಿ.ಡಿ ಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ವರದಿ: ಗುರುರಾಜ್ ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ