ಮಂಗಳೂರು: ಆಟಿ ತಿಂಗಳ ವೈವಿಧ್ಯಮಯ ತಿಂಡಿ ತಿನಸುಗಳ ಪ್ರದರ್ಶನ ಮತ್ತು ಮಾರಾಟ "ತಿಂಡಿ ಹಬ್ಬ -2023" ಆಗಸ್ಟ್ 5 ಮತ್ತು 6 ರಂದು ಮಂಗಳೂರು ಶರವು ದೇವಳ ಸಮೀಪದ ಬಾಳಂಭಟ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ನಗರದ ಜನರಿಗೆ ಆಟಿ ತಿಂಗಳ ಆಹಾರ ಸವಿಯಲು ಅವಕಾಶ ಸಿಗುವುದೇ ಅಪರೂಪ. ಈ ಹಿನ್ನೆಲೆಯಲ್ಲಿ ಪೇಟೆ ಜನರಿಗೆ ಆಟಿ ಖಾದ್ಯ ಉಣಬಡಿಸಲು ವಿವಿಧ ಭಾಗಗಳಿಂದ ಬಾಣಸಿಗರನ್ನು, ಖಾದ್ಯ ತಯಾರಿಯಲ್ಲಿ ಪಳಗಿದ ಮಹಿಳೆಯನ್ನು, ಸಂಘಟನೆಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೆಸು ಪತ್ರೋಡೆ, ತಜಂಕ್ ಪತ್ರೊಡೆ, ಉಂಡ್ಲುಕ, ಉಪ್ಪಡ್ ಪಚ್ಚಿರ್ ವಿಶೇಷ ಖಾದ್ಯ, ಹಲಸಿನ ದೋಸೆ, ಗಟ್ಟಿ, ಪಾಯಸ, ಹಲಸಿನ ಮಂಚೂರಿ, ಆಟಿ ತಿಂಗಳಲ್ಲಿ ದೇಹದ ಆರೋಗ್ಯ ಕ್ಕಾಗಿ ಸೇವಿಸುವ ವಿಶೇಷ ಕಷಾಯ ಗಳು, ಸಿರಿಧಾನ್ಯಗಳದಮಾಡಿದ ಖಾದ್ಯಗಳು ತಿಂಡಿ ಹಬ್ಬದಲ್ಲಿ ಮಾರಾಟಗೊಳ್ಳಲಿದೆ.
ಅಲ್ಲದೆ, ಹಲಸಿನ ಹೋಳಿಗೆ, ಐಸ್ ಕ್ರೀಂ, ತರಕಾರಿ ಗಿಡಗಳ ಮಾರಾಟ, ಉತ್ತರ ಕನ್ನಡ ಜಿಲ್ಲೆಯ ಖಾದ್ಯಗಳು, ಧಾರವಾಡ ಭಾಗದ ವಿಶೇಷ ತಿಂಡಿಗಳು, ವಿವಿಧ ಹಣ್ಣಿನ ಉತ್ಪನ್ನಗಳು, ತರಕಾರಿ ಬೀಜಗಳು ಸೇರಿದಂತೆ 50ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ, ಸೆಲ್ಫಿ ಸ್ಪರ್ಧೆ, ವೀಡಿಯೊ ಸ್ಪರ್ಧೆ ಆಯೋಜಿಸಲಾಗಿದ್ದು, 24 ಕ್ಯಾರೆಟ್ ನ ಚಿನ್ನದ ನಾಣ್ಯ, ಬೆಳ್ಳಿ ನಾಣ್ಯ, ಸೀರೆ ಹಾಗೂ ಇನ್ನಿತರ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತ ಎಂದು ಕಾರ್ಯಕ್ರಮ ಸಂಚಾಲಕ ಪ್ರಕೃತಿ ಫುಡ್ಸ್ ಪ್ರಕಾಶ್ ಪ್ರಭು (7090330003) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ