ನಮ್ಮ ಜವಾಬ್ದಾರಿ ನಿಭಾಯಿಸೋಣ: ಪಿ.ಎಸ್. ರವೀಂದ್ರನಾಥ್

Upayuktha
0

ಮಂಗಳೂರು: ಮಂಗಳೂರಿನ ಬಿಜೈ ಕಾಪಿಕಾಡಿನ ಬಾರೆಬೈಲ್ ಬಡಾವಣೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಬಡಾವಣೆಯ ನಿವಾಸಿ,  ಜ್ಞಾನವೃಧ್ಧರಾದ ಹಿರಿಯ ನಾಗರಿಕ  ವಿಠಲ ಭಟ್ ರವರು ಮುಂಜಾನೆ ಸರಿಯಾಗಿ 8:00 ಘಂಟೆಗೆ ಧ್ವಜಾರೋಹಣಗೈದು ತ್ರಿವರ್ಣ ಧ್ವಜವನ್ನು ಅರಳಿಸಿದರು.  ನೆರೆದವರೆಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಅಭಿಮಾನ ಪೂರ್ವಕವಾಗಿ ಹಾಡಿ ಧ್ವಜ ವಂದನೆಯನ್ನು ಸಲ್ಲಿಸಿದರು. 


ನಗರದ ಪ್ರಸಿದ್ಧ ಹಿರಿಯ ವಕೀಲರಾದ  ಪಿ.ಎಸ್.ರವೀಂದ್ರನಾಥರವರು ಗೌರವ ಅತಿಥಿಗಳಾಗಿ ಸ್ವಾತಂತ್ರ್ಯದ  ಹಾಗೂ ತ್ರಿವರ್ಣ ಧ್ವಜದ ಪ್ರಾಮುಖ್ಯತೆ ಬಗ್ಗೆ ಸುಂದರವಾಗಿ ಮಾತನಾಡಿ ನಮ್ಮೆಲ್ಲರ ಜವಾಬ್ದಾರಿಯನ್ನೂ ತಿಳಿಸಿಕೊಟ್ಟರು. ಅಂತೆಯೇ ಇನ್ನೋರ್ವ ಅತಿಥಿ ಸ್ಥಾನದಿಂದ ನಿವೃತ್ತ ಪ್ರಾಚಾರ್ಯ ಹಾಗೂ ಸದರಿ ನಗರದ ಸಂಚಾರ ಮೇಲ್ವಿಚಾರಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀ ಎಂ.ಎಲ್. ಸುರೇಶ್ ನಾಥ್ ರವರು ಸ್ವತಂತ್ರ ದೇಶದಲ್ಲಿ ಶಾಂತಿ, ಸಮೃದ್ಧಿ, ಸಾಧನೆ ಮತ್ತು ಅಭಿವೃದ್ಧಿಯ ಹಾದಿಯ ಸಮ್ಮಿಳನದಲ್ಲಿ ನಾಗರಿಕರ ಪಾತ್ರವನ್ನು ವಿವರಿಸಿದರು. 


ತದನಂತರ ಬಡಾವಣೆಯ ನಿವಾಸಿಗಳಾದ  ರೂಪ ಅಶ್ವಿನ್ ಮತ್ತು  ಸಂಧ್ಯಾ  ಜೋನಸ್ ರವರ ನೇತೃತ್ವದಲ್ಲಿ ದೇಶಭಕ್ತಿ ಸಮೂಹ ಗಾಯನವು ನೆರೆದಿದ್ದ ಎಲ್ಲರನ್ನೂ ರೋಮಾಂಚನಗೊಳಿಸಿತು.   ಕಾರ್ಯಕ್ರಮವನ್ನು ಆಯೋಜಿಸಿದ್ದ ಕೊಡು ಗೈದಾನಿ, ನಗರದ ಪ್ರಮುಖ ಉದ್ಯಮಿ ಸುನಿಲ್ ಜೋನಸ್ ರವರು ಧನ್ಯವಾದ ಸಮರ್ಪಣೆ ಗೈದರು. 


ಗೃಹ ರಕ್ಷಕ ದಳದ ಸಮಾದೇಷ್ಟ , ಸರಳ, ಜನಾನುರಾಗಿ ಡಾಕ್ಟರ್ ಮುರಲಿ ಮೋಹನ ಚೂಂತಾರ್ ಕಾರ್ಯಕ್ರಮವನ್ನು  ಸಾಂದರ್ಭಿಕ ಸವಿನುಡಿಯೊಂದಿಗೆ ಚಿಕ್ಕದಾಗಿ ಚೊಕ್ಕವಾಗಿ ನಡೆಸಿಕೊಟ್ಟರು. ಉಪಹಾರದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಬಡಾವಣೆಯ ಸುಮಾರು 150 ಮಂದಿ ಈ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top