ನಕಲಿ ಉತ್ಪನ್ನಗಳಿಂದ ರೈತರ ರಕ್ಷಣೆಗೆ ಜಿಎವಿಎಲ್ ಹೊಸ ಪ್ಯಾಕೇಜಿಂಗ್‌

Chandrashekhara Kulamarva
0


ಕೋಲಾರ: ಭಾರತದ  ದ್ರಾಕ್ಷಿ ಬೆಳೆಗಾರರು ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆಯಲು ನೆರವಾಗುತ್ತಿರುವ ತನ್ನ  ಜೈವಿಕ ಉತ್ತೇಜಕ ಕಂಬೈನ್ 25 ವರ್ಷಗಳನ್ನು ಪೂರ್ಣಗೊಳಿಸಿದ್ದು ಈ ಸಂದರ್ಭದಲ್ಲಿ ರೈತರನ್ನು ನಕಲಿ ಉತ್ಪನ್ನಗಳಿಂದ ರಕ್ಷಿಸಲು ಹೊಸ ಪ್ಯಾಕೇಜಿಂಗ್ ಪರಿಚಯಿಸಿದೆ.


'ಕಂಬೈನ್' ಹೊಸ ಪ್ಯಾಕ್ ಬಳಕೆದಾರ ಸ್ನೇಹಿಯಾಗಿದೆ.  ಸುರಕ್ಷಿತ ಪ್ಯಾಕೇಜಿಂಗ್ ಬಾಟಲಿಯಲ್ಲಿ ಬರುತ್ತದೆ. ಇದು ಅಕ್ರಮ ತಡೆ ಮುದ್ರೆಯನ್ನು ಹೊಂದಿದೆ. ಯಾರಾದರೂ ಬಾಟಲಿ ತೆರೆಯಲು ಪ್ರಯತ್ನಿಸಿದರೆ ಅದು ಸ್ಪೋಟಗೊಂಡು ಬೀಳುತ್ತದೆ.  ನಕಲು ಮಾಡುವುದನ್ನು ತಪ್ಪಿಸಲು ಲೇಬಲ್ ಸಂಕೀರ್ಣವಾದ ವಾಟರ್‍ಮಾರ್ಕ್‍ಗಳನ್ನು ಹೊಂದಿದೆ ಎಂದು ಜಿಎವಿಎಲ್ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಸಿಂಗ್ ಯಾದವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಬಾಟಲಿಯು ಹಾಲೊಗ್ರಾಮ್ ಅನ್ನು ಸಹ ಹೊಂದಿದೆ. ಬಾಟಲ್‍ನ ದೃಢೀಕರಣ ಖಚಿತಪಡಿಸಲು ಪ್ರತಿಯೊಂದು ಬಾಟಲಿಯಲ್ಲೂ ವಿಶಿಷ್ಟವಾದ 9-ಅಂಕಿಯ ಕೋಡ್ ಇರಲಿದೆ. ಹಾಲೊಗ್ರಾಮ್‍ನಲ್ಲಿ ಗ್ರಾಹಕನಿಗೆ ಉತ್ಪನ್ನವು ಅಸಲಿ ಎಂಬುದನ್ನು ಖಾತ್ರಿಪಡಿಸಲು 'ಜಿ' ಅಕ್ಷರವನ್ನು ಅಚ್ಚುಕಟ್ಟಾಗಿ ಎಂಬೆಡ್ ಮಾಡಿದ್ದರೆ, ದೃಷ್ಟಿಹೀನರಿಗೆ 'ಬ್ರೈಲ್' ಗುರುತು ಓದುವ ಸೌಲಭ್ಯ ಸೇರ್ಪಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.


ಯುರೋಪ್‍ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಆಯೋಗವು (ಯುಎನ್‍ಇಸಿಇ) ನಿಗದಿಪಡಿಸಿದ ಮಾರ್ಗಸೂಚಿಗಳೊಂದಿಗೆ ಹೊಂದಿಕೊಂಡಿರುವ 'ಕಂಬೈನ್', ದ್ರಾಕ್ಷಿ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಜೈವಿಕ ಉತ್ತೇಜಕವಾಗಿದೆ. ಜೈವಿಕ ಉತ್ತೇಜಕ ಕಂಬೈನ್' ಅನ್ನು ಸಮರ್ಪಕ ಪ್ರಮಾಣದಲ್ಲಿ ಬಳಸಿದರೆ, ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಗೊಂಚಲು 400 ರಿಂದ 500 ಗ್ರಾಂ ತೂಕ, 18 ಮಿಮೀ ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಸದ  ಬೆರ್ರಿ, ಏಕರೂಪದ  ಬೆರ್ರಿ ಬಣ್ಣ ಮತ್ತು ಸುಧಾರಿತ  ಜೀವಿತಾವಧಿಯಂತಹ ಹೆಚ್ಚುವರಿ ಮಾನದಂಡಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಸೂಕ್ಷ್ಮ ಶಿಲೀಂಧ್ರದಂತಹ ರೋಗ ಹರಡುವ ಕೀಟಗಳ ಪ್ರಭಾವವನ್ನು ಕಡಿಮೆ ಮಾಡುವ ಸಾಮಥ್ರ್ಯವನ್ನೂ 'ಕಂಬೈನ್' ಒಳಗೊಂಡಿದೆ ಎಂದು ವಿವರಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top