ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿ ರಚನೆ

Upayuktha
0

ಕೊಡಗು: ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿ ರಚನೆಯ ಸಭೆಯು -30-7- 2023 ಆದಿತ್ಯವಾರದಂದು ಮಡಿಕೇರಿಯ vandam ಎಂಟರ್ಪ್ರೈಸಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಗಣ್ಯರಿಂದ ದೀಪೋಜ್ವಾಲನೆ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೊಡಗು ಯುವ ಘಟಕದ ಗೌರವ  ಸಲಹೆಗಾರರಾದ ಶ್ರೀ ಕುಶಾಲಪ್ಪ ಅವರು ಮಾತನಾಡಿ... ಯುವ ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮುಂದೆ ಯಾವ ರೀತಿ ಯುವ ಘಟಕ ಮುಂದು ವರಿಯಬೇಕೆಂದು  ಸಲಹೆ ನೀಡಿದರು. 


vandam ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರಾದ ಲಯನ್ ಶ್ರೀದಾಮೋದರ ಅವರು ಮಾತನಾಡಿ ಕುಲಾಲ ಸಂಘ ದ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮುತ್ತಮ್ಮ ನೀಡಿದ ಸೇವೆಯನ್ನು ನೆನಪಿಸಿದರು. ಮುಂದೆ ಯುವಕರು ಸಂಘದಲ್ಲಿ ಸಕ್ರಿಯಗೊಂಡು ಇನ್ನಷ್ಟು ಸಂಘವನ್ನು ಬಲಪಡಿಸಿ ಎಂದು  ಸಲಹೆ ನೀಡಿದರು. ಕೊಡಗು ಜಿಲ್ಲಾ ಅಧ್ಯಕ್ಷರಾದ ಶ್ರೀ ನಾಣಯ್ಯ ಅವರು  ಮಾತನಾಡಿ ಯುವ ಘಟಕವು ಕೊಡಗು ಜಿಲ್ಲಾ ಸಂಘಕ್ಕೆ ಪೂರಕವಾಗಿ ಕೆಲಸ ಮಾಡಲಿ ಮತ್ತು ಇದರಿಂದ ಸಂಘವು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದು ನುಡಿದರು. 


ನಂತರ ಮಾತನಾಡಿದ ಅರುಣ್ ಕುಲಾಲ್ ಕೂಡಿಗೆ ಅವರು ಯುವಕರು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ ಜಿಲ್ಲೆಯ ಎಲ್ಲಾ ಯುವಕರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಆಗ ಸಮಾಜ ಬಾಂಧವರ ಕಣ್ಣೀರು ಒರೆಸಲು ಈ ಘಟಕವು ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

ನಂತರ ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಶ್ರೀ ಕುಶಾಲಪ್ಪ ಕುಶಾಲನಗರ ಲಯನ್, ಶ್ರೀ ದಾಮೋದರ ಮಡಿಕೇರಿ, ಶ್ರೀ ನಾರಾಯಣ ಮೂಲ್ಯ ಕುಶಾಲನಗರ. 

ಅಧ್ಯಕ್ಷರು- ಚಂದ್ರಶೇಖರ್ ಕುಲಾಲ್ ಮೂರ್ನಾಡ್ 

ಉಪಾಧ್ಯಕ್ಷರು- ಅಶ್ವಥ್ ಮಡಿಕೆ ಬೀಡು, ಜಯಪ್ರಕಾಶ್ ಮಡಿಕೇರಿ

ಪ್ರಧಾನಕಾರ್ಯದರ್ಶಿ- ಶ್ರೀ ಪವನ್ ಕುಲಾಲ್ ಚೇರಂಬಾಣೆ

ಜೊತೆ ಕಾರ್ಯದರ್ಶಿಗಳು-ಅರುಣ್ ಕುಲಾಲ್ ಚೇರಂಬಾಣೆ, ಉದಯ್ ಕುಲಾಲ್ ಮಡಿಕೇರಿ

ಖಜಾಂಜಿ - ಶ್ರೀ ಸುರೇಶ್ ಮಡಿಕೇರಿ

ಕ್ರೀಡಾ ಕಾರ್ಯದರ್ಶಿ - ಶ್ರೀ ಹರೀಶ್ ಮಡಿಕೇರಿ, ಶ್ರೀ ಲೋಕೇಶ್ ಕುಶಾಲ್ ನಗರ


ಕ್ರೀಡಾ ಸಹ ಕಾರ್ಯದರ್ಶಿಗಳು - ಮಂಜುನಾಥ K.T ಮಡಿಕೆಬೀಡು, ದಯಾನಂದ್ ಚೇರಂಬಾಣೆ ರಾಜೇಶ್ ಪನ್ನೇ, ಶೃತಿಕಾ ಬೆಟ್ಟಗೇರಿ, ಕೌಶಿಕ್ ಚೇರಂಬಾಣೆ, ಶರಣು ಚೇರಂಬಾಣೆ, ರಂಜನ್ ಕುಲಾಲ್ ಪುರುಷೋತ್ತಮ್ ಹೆಮ್ಮಾಡು


ಸಂಘಟನಾ ಕಾರ್ಯದರ್ಶಿಗಳು - ಶ್ರೀ ಗಿರೀಶ್ ಕುಲಾಲ್ ಮಡಿಕೆಬೀಡು, ಶ್ರೀ ದಿನೇಶ್ ಕುಲಾಲ್ ಐಗೂರು, ಶ್ರೀ ಅಪ್ಪಾಜಿ ಕುಶಲ್ನಗರ, ಶ್ರೀಅರುಣ್ ಕುಲಾಲ್ ಕೂಡಿಗೆ, ಶ್ರೀ ರಾಮಚಂದ್ರ ಕುಶಾಲ್ ನಗರ, ಶ್ರೀ ಭರತ್ ಕುಲಾಲ್ ಸೋಮವಾರಪೇಟೆ


ಸಂಘಟನಾ ಸಹ ಕಾರ್ಯದರ್ಶಿಗಳು - ಪ್ರಮೋದ್ ಕುಲಾಲ್,  ನಾಗೇಶ್ ಕುಲಾಲ್ ಮಕಂದೂರು, ಯತೀಶ್, ಸತೀಶ್ ಕುಲಾಲ್, ಶರಣ್


ನಿರ್ದೇಶಕರು - ವಿನು ಚೇರಂಬಾಣೆ, ಮಂಜುನಾಥ್ ಕುಶಾಲನಗರ, ಅಶೋಕ್ ಮಡಿಕೆ ಬೀಡು, ಲಕ್ಷ್ಮಣ್ ಕೆ ವೈ ಮಡಿಕೆ ಬೀಡು, ರಾಜಮಣಿ ಚೇರಂಬಾಣೆ, ಶ್ರೀನಿವಾಸ್ ಮಡಿಕೆಬೀಡು ದೇವಯ್ಯ ಚೇರಂಬಾಣೆ ಇವರನ್ನು ಆಯ್ಕೆ ಮಾಡಲಾಯಿತು.


ಚಂದ್ರಶೇಖರ್ ಕುಲಾಲ್ ಮೂರ್ನಾಡ್ ಸ್ವಾಗತಿಸಿದರು. ಪವನ್ ಕುಲಾಲ್ ಚೇರಂಬಾಣೆ ಧನ್ಯವಾದ ಸಮರ್ಪಿಸಿದರು. ಶ್ರೀನಿವಾಸ್ ಕೆಕೆ ಮಡಿಕೆಬೀಡು ಪ್ರಾರ್ಥಿಸಿದರು.


ನಂತರ ವ್ಯಂಡಮ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರಾದ ಲಯನ್ ಶ್ರೀ ದಾಮೋದರ್ ಅವರ ಅಚ್ಚುಕಟ್ಟಾದ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ಸಭೆ ಸಮಾಪನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top