ಕುಕ್ಕುಟೋದ್ಯಮ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸಚಿವರ ಭರವಸೆ

Upayuktha
0

ಬೆಂಗಳೂರು: ರಾಜ್ಯದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರನ್ನು ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ (ಕೆಪಿಎಫ್‍ಬಿಎ)ನ ಪ್ರತಿನಿಧಿಗಳು ಭೇಟಿ ಮಾಡಿ, ರಾಜ್ಯದ ಕುಕ್ಕುಟೋದ್ಯಮ ಕ್ಷೇತ್ರದ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದ್ದು, ಸಚಿವರು ಇದಕ್ಕೆ ಪೂರಕವಾಗಿ ಸ್ಪಂಧಿಸುವ ಜತೆಗೆ ಸಮಸ್ಯೆ ಪರಿಹಾರಕ್ಕೆ ಭರವಸೆಯನ್ನು ನೀಡಿದರು.


ಕೆಪಿಎಫ್‍ಬಿಎ ಅಧ್ಯಕ್ಷ ಡಾ. ಸುಶಾಂತ್ ರೈ ನೇತೃತ್ವದ ನಿಯೋಗದಿಂದ ಕುಕ್ಕುಟೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ವಿದ್ಯುತ್ ದರ ಹೆಚ್ಚಳದಿಂದ ಕುಕ್ಕುಟೋದ್ಯಮಕ್ಕೆ ಹೊರೆಯಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ಕೆಲವು ಕೋಳಿ ಘಟಕಗಳು ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಯಿತು. ಡಾ. ಸುಶಾಂತ್ ರೈ ಅವರು ಸಂಘದ ಚಟುವಟಿಕೆಗಳು, ಅದರ ಅತ್ಯಾಧುನಿಕ ರೋಗನಿರ್ಣಯ ಪ್ರಯೋಗಾಲಯ ಮತ್ತು ತರಬೇತಿ ಕೇಂದ್ರ ಮತ್ತು ಕೋಳಿ ವಲಯವನ್ನು ಉತ್ತೇಜಿಸಲು ಸರಕಾರ ಮತ್ತು ಸದಸ್ಯರೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ತಿಳಿಸಿದರು.


ಕೆಪಿಎಫ್‍ಬಿಎ ಮಾಜಿ ಅಧ್ಯಕ್ಷ ಕೆ.ಎಸ್. ಅಶೋಕ್ ಕುಮಾರ್ ಅವರು ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ಕ್ಷೇತ್ರವು ಬೆಳೆದಿರುವ ಹಾಗೂ ಇನ್ನೂ ಹೆಚ್ಚಿನ ಬೆಳವಣಿಗೆಗೆ ಬೇಕಾದ ಸಾಮಾರ್ಥ್ಯವಿದ್ದು ಅದಕ್ಕೆ ಸಚಿವಾಲಯದ ಬೆಂಬಲ ಕೋರಿದರು. ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಕೆಪಿಎಫ್‍ಬಿಎ ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿ, ಕೋಳಿ ಸಾಕಣೆದಾರರಿಗೆ ಪ್ರಯೋಜನವಾಗುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಸಚಿವರು ತಿಳಿಸಿದರು. ಕೆಪಿಎಫ್‍ಬಿಎ ನಿಯೋಗ ಸಚಿವ ಕೆ.ವೆಂಕಟೇಶ್ ಅವರನ್ನು ಸನ್ಮಾನಿಸಿತು. ಈ ಸಂದರ್ಭ ಎಸ್.ಆರ್.ಆಗ್ರೋ ಫಾರ್ಮ್ಸ್‍ನ ರಾಜೇಶ್ ರೆಡ್ಡಿ ಮತ್ತು ಕೆಪಿಎಫ್‍ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top