ಕಾರ್ಕಳ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಮಲಯಾಳಕ್ಕೂ ಲಿಪಿಯನ್ನು ನೀಡಿದ ಭಾಷೆಯಾಗಿದ್ದು ಇತರ ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಬೆಳೆದು ಬಂದ ಸ್ವತಂತ್ರ ಭಾಷೆಯಾಗಿದೆ ಎಂಬುದಾಗಿ ಪ್ರಗತಿಪರ ಕೃಷಿಕರು ಹಾಗೂ ತುಳುಕೂಟ ಬೆದ್ರ ಇದರ ಅಧ್ಯಕ್ಷರೂ ಆಗಿರುವ ಧನಕೀರ್ತಿ ಬಲಿಪ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಆಗಸ್ಟ್ 5 ರಂದು ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ನಡೆದ ತುಳುಕೂಟದ ಸದಸ್ಯರ ಮಾಸಿಕ ಸಭೆಯಲ್ಲಿ ಅವರು ‘ತುಳು ಬಾಸೆದ ಪೊರ್ಲು ಪೊಲಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು.
ತುಳು ಭಾಷೆಯ ಶಬ್ದ ಸಂಪತ್ತು, ಭಾಷೆಯ ಸೊಗಸು ಭಾಷಾ ವೈವಿಧ್ಯತೆಗಳ ಬಗ್ಗೆ ಸೋದಾಹರಣವಾಗಿ ವಿವರಿಸಿದ ಅವರು ನಮ್ಮ ಮಾತೃಭಾಷೆಯ ಬಗ್ಗೆ ನಾವು ಅಭಿಮಾನ ಬೆಳೆಸಿಕೊಂಡು ಮಕ್ಕಳಲ್ಲಿಯೂ ಆ ಭಾಷಾ ಪ್ರೀತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು.
ಜಯಂತಿ ಎಸ್. ಬಂಗೇರ ಅವರು ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಗಳಾದ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗರು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ