ಕರಂಬಳ್ಳಿ: ಶ್ರೀ ರಾಮತಾರಕ ಯಜ್ಞ, ಲಕ್ಷ ಪ್ರದಕ್ಷಿಣ ನಮಸ್ಕಾರ ಸಂಪನ್ನ

Upayuktha
0


ಉಡುಪಿ: ಅಧಿಕ ಶ್ರಾವಣ ಮಾಸದ ಅಂಗವಾಗಿ ಉಡುಪಿ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಶ್ರೀ ಪೇಜಾವರ  ಮಠಾಧೀಶರ ಸೂಚನೆಯಂತೆ ಲೋಕಕ್ಷೇಮಕ್ಕಾಗಿ ಹಮ್ಮಿಕೊಂಡಿದ್ದ ಶ್ರೀ ರಾಮ ಮಂತ್ರ ಜಪ ಸಹಿತ ಲಕ್ಷಪ್ರದಕ್ಷಿಣ ನಮಸ್ಕಾರ ಸೇವೆಯ ಮಂಗಲಾಚರಣೆ ಮತ್ತು ಶ್ರೀ ರಾಮ ತಾರಕ ಯಜ್ಞವು ಸೋಮವಾರ ಸಂಪನ್ನಗೊಂಡಿತು.


ಶ್ರೀ ಪಾಡಿಗಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ಕೆ ರಘುಪತಿ ಭಟ್ಟರ ಯಜಮಾನಿಕೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ವಿಶೇಷ ತುಲಸಿ, ಪುಷ್ಪಾರ್ಚನೆ, ಪ್ರಸನ್ನ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆಗಳು ನೆರವೇರಿದವು.

ಒಂದು ತಿಂಗಳ ಕಾಲ ನಡೆದ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top