ಕಲ್ಲಡ್ಕ: ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಒಂದು ಶಾಲೆಯಲ್ಲಿ ನಡೆದಾಗ ಮಕ್ಕಳ ಭವಿಷ್ಯದ ಹಾದಿ ಒಳ್ಳೆಯ ಹಂತಕ್ಕೆ ಹೋಗುತ್ತದೆ, ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲಾ ಕೆಲಸಗಳು ಯಾಂತ್ರಿಕ ವಾಗಿ ನಡೆಯುವುದು ಆದ್ದರಿಂದ ಶಾಲೆಯಲ್ಲಿ ಗಣಕಯಂತ್ರದ ಅವಶ್ಯಕತೆ ಇರುವುದನ್ನು ಮನಗಂಡು ಶಾಲಾ ಕಛೇರಿ ಕೆಲಸ ಕಾರ್ಯಗಳ ಅನುಕೂಲತೆಗೆ ತಮ್ಮ ಪುಟ್ಟ ಸಹಾಯ ಮಾಡುವುದು ತುಂಬಾ ಸಂತೋಷ ಸಿಗುತ್ತದೆ ಎಂದು ಟಾಟಾ ಕಂಪನಿಯ ಸುಧೀರ್ ಸಾಗರ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಬ ಶಾಲೆಗೆ ಗಣಕಯಂತ್ರ ಹಾಗೂ ಪ್ರಿಂಟರ್ ಹಸ್ತಾಂತರಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಎರಡನೇ ಪೋಷಕರಿಗೆ ಸಮಾನವಾಗಿರುತ್ತಾರೆ ಅವರು ಶೈಕ್ಷಣಿಕ ವಿಚಾರಗಳಿಗೆ ಅಕ್ಕರೆಯಿಂದ ಸ್ಪಂದಿಸುವ ಮೂಲಕ ಕಲಿಕೆಗೆ ಪ್ರೇರಕವಾದಾಗ ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಗೆ ಬರಲು ಹಿಂಜರಿಯುವುದಿಲ್ಲ ಅಂತಹ ವಾತಾವರಣದ ಸೃಷ್ಟಿ ಶಿಕ್ಷಕರಿಂದ ಆಗಬೇಕು ಎಂದು ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಶಾಲೆಯ ಪರವಾಗಿ ಸುಧೀರ್ ಸಾಗರ್ ಅವರನ್ನು ಅಭಿನಂದಸಿ ಮಾತನಾಡಿದರು.
ಕಾರ್ಯಕ್ರಮದ ಬಳಿಕ ಶಾಲೆಯ ಎಲ್ಲಾ ಶಿಕ್ಷಕರನ್ನು ಒಟ್ಟು ಸೇರಿಸಿ, ಸುಧೀರ್ ಸಾಗರ್ ರವರು ತನ್ನ ಬಾಲ್ಯದ ನೆನಪುಗಳು, ಬಾಲ್ಯದ ಶಿಕ್ಷಕರ ಜೊತೆಗೆ ಇರುವ ಒಡನಾಟ ತಮ್ಮ ಶಿಕ್ಷಕರಿಗೆ ನಾವು ನೀಡಬೇಕಾದ ಗೌರವ, ನಮ್ಮ ಹಿರಿಯರಿಂದ ಪಡೆದ ಸಂಸ್ಕಾರ ಮುಂದಿನ ಪೀಳಿಗೆಗೆ ಯಾವ ರೀತಿಯಲ್ಲಿ ದಾಟಿಸುವ ಕಾಯ೯ ನಮ್ಮಿಂದ ಆಗಬೇಕಾಗಿದೆ ಎಂದು ಶಿಕ್ಷಕರು ಜೊತೆಗೆ ವಿಷಯ ಹಂಚಿಕೊಂಡು ಗುಣಮಟ್ಟದ ಶಿಕ್ಷಣದ ಕಡೆಗೆ ಹೆಚ್ಚು ಗಮನ ನೀಡಿ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ತಾನು ದುಡಿಯುವ ಕಂಪನಿಯ ಮೂಲಕ ಒದಗಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀದೇವಿ ಕಂನ್‌ಸ್ಟ್ರಕ್ಷನ್ಸ್ ಮಾಲಕರಾದ ಸಂದೀಪ್ ಶೆಟ್ಟಿ ಅರೆಬೆಟ್ಟು,ಸುಧೀರ್ ಸಾಗರ್ ರವರ ಪುತ್ರ ಚಿರಾಗ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯಕ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ,ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ