ಕಲ್ಲಬೆಟ್ಟು: ಶಾಲಾ ಔಷಧಿ ವನದ ಉದ್ಘಾಟನೆ, 250 ಸಸ್ಯಗಳ ನಾಟಿ

Upayuktha
0

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ



ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ ಸಹಯೋಗದಲ್ಲಿ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ‘ಶಾಲಾ ಔಷಧಿ ವನ’ವನ್ನು ಸಸ್ಯಗಳ ನಾಟಿ ಮೂಲಕ ಉದ್ಘಾಟಿಸಲಾಯಿತು.


ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಹಾಗೂ ಸುರೇಶ್ ಕೋಟ್ಯಾನ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. 

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ  ಪದ್ಯಾಣ ಮಾತನಾಡಿ, ಔಷಧೀಯ ಸಸ್ಯಗಳ ಮಹತ್ವವನ್ನು ತಿಳಿಸಿದರು.


ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲಾ ಪ್ರಾಂಶುಪಾಲ ಸಂಗಯ್ಯ ಬಸಯ್ಯ ಹಿರೇಮಠ ದೈನಂದಿನ ಜೀವನದಲ್ಲಿ ಸಸ್ಯದ ಬಳಕೆ ಕುರಿತು ಮಾಹಿತಿ ನೀಡಿದರು.


ಮಕ್ಕಳು, ಉಪನ್ಯಾಸಕರು ಸೇರಿದಂತೆ ಪಾಲ್ಗೊಂಡವರು ಬಿಲ್ವಪತ್ರೆ, ಕದಿರ, ಅಶ್ವತ್ಥ, ಚಂದನ, ರಕ್ತಚಂದನ, ಶಾಂತಿ, ನೆಲ್ಲಿ ಸೇರಿದಂತೆ ಸುಮಾರು 120 ಪ್ರಭೇದಗಳ 250 ಸಸಿ ನೆಟ್ಟರು. ಮಕ್ಕಳು ಮುಂದಿನ ಐದು ವರ್ಷಗಳ ವರೆಗೆ ಈ ಸಸ್ಯಗಳ ಪಾಲನೆ ಮಾಡಲಿದ್ದಾರೆ.


ಡಾ.ಕ್ಷಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಲಕ್ಷ್ಮೀ ಪೈ ವಂದಿಸಿದರು. ಬಳಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top