ಭಾರತದ ಚಂದ್ರಯಾನ-3 ಅದ್ಭುತ ಯಶಸ್ಸು: ಚಂದ್ರಮನ ಮೇಲಿಳಿದ ಇಸ್ರೋದ ಚಂದ್ರಯಾನ ನೌಕೆ

Upayuktha
1 minute read
0

 



ಕೋಟಿ ಕೋಟಿ ಭಾರತೀಯರ ಕನಸು ನನಸಾದ ಕ್ಷಣವಿದು. ಹರಕೆ ಹಾರೈಕೆಗಳು ಫಲಿಸಿದ ಶುಭ ಗಳಿಗೆಯಿದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋದ ಭೀಮ ಹೆಜ್ಜೆ- ಬಾಹ್ಯಾಕಾಶ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾದ ಸುದಿನ.

ಹೌದು. ಚಂದ್ರಯಾನ3- ಚಂದ್ರನ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿದ ಬಾಹ್ಯಾಕಾಶ  ನೌಕೆ ಚಂದ್ರಮನ ದಕ್ಷಿಣ ಧ್ರುವದ ನೆಲದಲ್ಲಿ ಕರಾರುವಾಕ್ಕಾಗಿ ಇಳಿದಿದೆ. ಎರಡು ದಿನಗಳ ಹಿಂದೆಯಷ್ಟೇ ರಷ್ಯಾದ ಲೂನಾರ್ ಮಿಷನ್ ನೌಕೆ ವಿಫಲಗೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಭಾರತದ ಚಂದ್ರಯಾನ-2 ಕೂಡ ಕೊನೇ ಕ್ಷಣದಲ್ಲಿ ವಿಫಲವಾಗಿ ನಿರಾಸೆ ಮೂಡಿಸಿದ್ದನ್ನು ಮರೆಯುವಂತಿಲ್ಲ. ಅದಾಗಿ ಎರಡೇ ವರ್ಷದೊಳಗೆ ಚಂದ್ರಯಾನ03 ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಕೀರ್ತಿ ನಮ್ಮ ಹೆಮ್ಮೆಯ ಇಸ್ರೋದ್ದಾಗಿದೆ.

ಈಗ ಚಂದಮಾಮ ನಮ್ಮ ಕೈಗೆಟುಕಿದ್ದಾನೆ ಎನ್ನಲು ಅಡ್ಡಿಯಿಲ್ಲ.

ಇಸ್ರೋದ ಈ ಮಹಾಮಿಷನ್ ನೇರ ಪ್ರಸಾರವನ್ನು ಜಗತ್ತಿನಾದ್ಯಂತ (ಇಸ್ರೋದ ಯೂಟ್ಯೂಬ್ ಚಾನೆಲ್‌ನಲ್ಲಿ) 1.40 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಇನ್ನು ಬೇರೆ ಬೇರೆ ಟಿವಿ ಚಾನೆಲ್‌ಗಳಲ್ಲಿ ಅದನ್ನು ನೋಡಿದವರು ಸಂಖ್ಯೆ ಬೇರೆ. ಅದರ ಲೆಕ್ಕ ಇನ್ನೂ ಸಿಗಬೇಕಷ್ಟೆ.

ಪ್ರಸ್ತುತ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದಲೇ ಚಂದ್ರಯಾನ-3 ಚಂದ್ರನ ನೆಒಲದಲ್ಲಿ ಇಳಿಯುವ ವಿದ್ಯಮಾನವನ್ನು ಕಣ್ತುಂಬಿಕೊಂಡರು. ಬಳಿಕ ಭಾರತದ ಶ್ರೇಷ್ಠ ವಿಜ್ಞಾನಿಗಳನ್ನು ಅಭಿನಂದಿಸಿದರು. ದೇಶದ ಜನತೆಗೆ ಶುಭ ಸಂದೇಶ ನೀಡಿ ಸಂತಸ ಹಂಚಿಕೊಂಡರು.





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

إرسال تعليق

0 تعليقات
إرسال تعليق (0)
To Top