ಹಾಸನ: ಸಾಹುಕಾರ್ ಸಂಪತ್ತ ಅಯ್ಯಂಗಾರ್ ಎಂದೇ ಹೆಸರಾಗಿದ್ದ ಜಿ.ಎಸ್.ಸಂಪತ್ತಅಯ್ಯಂಗಾರ್ ಅವರು ಜಿಲ್ಲೆಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಓರ್ವರು. ಕೊಡುಗೈ ದಾನಿ.ಗೊರೂರಿನ ಎ.ಎನ್.ವರದ ರಾಜುಲು ಕಾಲೇಜಿಗೆ ಅವರ ಮತ್ತು ಅವರ ಕುಟುಂಬದ ಕೊಡುಗೆ ಮರೆಯುವಂತಿಲ್ಲ ಎಂದು ನಿವೃತ್ತ ಪ್ರಾಂಶುಪಾಲರು ಡಾ.ಎಂ.ಆರ್.ಚಂದ್ರಶೇಖರ್ ತಿಳಿಸಿದರು.
ಹಾಸನ ಮನೆ ಮನೆ ಕವಿಗೋಷ್ಠಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಾಯ ಹೋಬಳಿ ಘಟಕ ಅಧ್ಯಕ್ಷ ರಂಗನಟ ಜಗದೀಶ್ ರಾಮಘಟ್ಟ ಇವರ ಪ್ರಾಯೋಜನೆಯಲ್ಲಿ ವಾಣಿವಿಲಾಸ ರಸ್ತೆಹಾಸನಾಂಬ ಥಿಯಾಸಾಫಿಕಲ್ ಸೊಸೈಟಿ ಇಲ್ಲಿ ನಡೆದ 308ನೇ ತಿಂಗಳ ಕಾರ್ಯಕ್ರಮದಲ್ಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಜಿ.ಎಸ್.ಸಂಪತ್ತಅಯ್ಯಂಗಾರ್ ಬದುಕು ಮತ್ತು ಬರಹ ಉಪನ್ಯಾಸ ನೀಡಿ ಯಾವ ಆಡಂಬರವಿಲ್ಲದ ಸರಳ ಸಜ್ಜನಿಯಕೆಯ ಅವರ ಬದುಕು ನಮಗೆಲ್ಲಾ ಮಾರ್ಗದರ್ಶಿ ಎಂದರು.
ಸಾಹಿತಿಗೊರೂರು ಅನಂತರಾಜು ಮಾತನಾಡಿ ಓರ್ವ ಖಗೋಳ ಶಾಸ್ತ್ರಜ್ಞರಾಗಿ ಇವರು ರಾಮನ ಜನ್ಮಕುಂಡಲಿ ಬರೆದಿದ್ದಾರೆ. ರಾಮಾಂಕಿತ ಉಂಗುರ ಮತ್ತು ಕಾಲ ಪರಿಚಯ, ಹನುಮಂತನು ಲಂಕೆಗೆ ಹೋದದಾರಿ ಮತ್ತು ಮಹಾಭಾರತದ ಯುದ್ದಕಾಲ ಹಾಗೂ ಹತ್ತು ಸಾವಿರ ವರ್ಷಗಳ ಚರಿತ್ರೆ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾಭಾರತ ಮತ್ತು ರಾಮಾಯಣ ಯುದ್ದ ಕಾಲವನ್ನು ಪಂಚಾಂಗದ ಆಧಾರದ ಮೇಲೆ ಗುರುತಿಸಿದ್ದಾರೆ ಎಂದರು. ಉಪನ್ಯಾಸಕ ಡಾ. ಬರಾಳು ಶಿವರಾಮ ಅವರುಜಿ.ಎಸ್. ಸಂಪತ್ತೈಂಗಾರ್ ಅವರ ಸ್ವಾತಂತ್ರ್ಯ ಹೋರಾಟ ಕುರಿತಂತೆ ಕವಿಎನ್.ಎಲ್.ಚನ್ನೇಗೌಡ ತಾವು ಕಂಡ ಅವರ ಬದುಕು ಕುರಿತಂತೆ ಮಾತನಾಡಿದರು. ಕವಿಗೋಷ್ಠಿಯಲ್ಲಿ ಸುಶೀಲ ಸೋಮಶೇಖರ್, ಸುಂದರೇಶ್ ಡಿ.ಉಡುವೇರೆ, ವನಜ ಸುರೇಶ್, ಮಾಳೇಟರ ಸೀತಮ್ಮ ವಿವೇಕ್, ಉಮೇಶ್ ಹೊಸಹಳ್ಳಿ, ಸಾವಿತ್ರಿ ಬಿ.ಗೌಡ, ರೇಖಾ ಪ್ರಕಾಶ್, ಪ್ರತಿಭಾ ಬಿ.ಆರ್. ಹೆಚ್.ಬಿ.ಚೂಡಾಮಣಿ, ಪ್ರಜ್ವಲ್ ಕೆ.ಎಂ.ಕೌಡಳ್ಳಿ, ಗೊರೂರುಅನಂತರಾಜು, ಎನ್.ಎಲ್. ಚನ್ನೇಗೌಡ. ಸರೋಜಮ್ಮ ಸ್ವರಚಿತ ಕವಿತೆ ವಾಚಿಸಿದರು. ಎ.ವಿ.ರುದ್ರಪ್ಪಾಜಿರಾವ್, ಜಯದೇವಪ್ಪ, ಸಿ.ಡಿ.ಗುರುಲಿಂಗಪ್ಪ, ಜೆ.ಆರ್.ರವಿಕುಮಾರ್, ಯಾಕೂಬ್, ಜಿ.ಆರ್.ಶ್ರೀಕಾಂತ್, ಹೆಚ್.ಜಿ.ಕಾಂಚನಮಾಲಾ, ಎಸ್.ಎಸ್.ಚಂದ್ರಣ್ಣ, ದ್ಯಾವಪ್ಪ, ಕಾಳಾಚಾರ್, ಕಲಾವಿದಅತ್ನಿ ಸುರೇಶ್, ಕೆ.ವಿ.ಮಾರೆಸನ್ ಮೊದಲಾದವರು ಇದ್ದರು. ಸಮುದ್ರವಳ್ಳಿ ವಾಸು ಸ್ವಾಗತಿಸಿದರು. ದಾಕ್ಷಾಯಿಣಿ ಮುರುಗನ್ ಪ್ರಾರ್ಥಿಸಿದರು. ಶಿವನಂಜೇಗೌಡರು ಜನಪದಗೀತೆ, ಬ್ಯಾಟಾಚಾರ್ ರಂಗಗೀತೆಗಳಿಂದ ರಂಜಿಸಿದರು. ಜಗದೀಶ್ ರಾಮಘಟ್ಟ ಅವರ ರಾವಣ ಪಾತ್ರಾಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಿವೃತ್ತ ತಹಸೀಲ್ದಾರ್ ರಂಗನಟರು ಎ.ವಿ.ರುದ್ರಾಪ್ಪಾಜಿರಾವ್ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ