ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರತಿಮಾ ಹಾಸನ್ ಅವರನ್ನು ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ಅವರು ನೇಮಕ ಮಾಡಿರುತ್ತಾರೆ.
ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆಯಾಗಿದ್ದು ಸದಾ ಕ್ರಿಯಾಶೀಲರಾಗಿರುವ ಇವರು ಸಾಹಿತಿಗಳಾಗಿದ್ದು, ಉತ್ತಮ ಸಂಘಟಕರು, ಶಿಕ್ಷಕಿ, ಸಮಾಜಸೇವಕಿ, ಗಾಯಕಿ, ಪತ್ರಕರ್ತೆಯಾಗಿದ್ದು ಇವರ ಈ ಎಲ್ಲಾ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಇವರನ್ನು ಹಾಸನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು ಇವರಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಸಮಾಜ ಸೇವೆಯನ್ನು ಸಂಘವು ನಿರೀಕ್ಷಿಸುತ್ತದೆ ಎಂದು ರಾಜ್ಯದ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವರುವ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಹಾಸನ ಜಿಲ್ಲಾಧ್ಯಕ್ಷರಾದ ಸಾಹಿತಿ ಗೊರೂರು ಅನಂತರಾಜುರವರು, ಪತ್ರಿಕಾ ಬಳಗದವರು, ಹಿರಿಯ, ಕಿರಿಯ ಸಾಹಿತಿ ಮಿತ್ರರು, ಸಮಾಜ ಸೇವಾಸಕ್ತರು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ