ಗೋಕರ್ಣ ವಲಯ ಮಟ್ಟದ ಕ್ರೀಡಾಕೂಟ: ಸಾರ್ವಭೌಮ ಗುರುಕುಲ ಉತ್ತಮ ಸಾಧನೆ

Upayuktha
0


ಗೋಕರ್ಣ: ಸಾರ್ವಜನಿಕ ಶಿಕ್ಷಣ ಇಲಾಖೆಯ ಗೋಕರ್ಣ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಇಲ್ಲಿನ ಸಾರ್ವಭೌಮ ಗುರುಕುಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.


ಸಾರ್ವಭೌಮ ಗುರುಕುಲ, ಧರ್ಮಚಕ್ರ ಟ್ರಸ್ಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿಯ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಇಲ್ಲಿನ ಭದ್ರಕಾಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಎರಡು ದಿನಗಳ ಕೂಟದ ಬಾಲಕರ ವಿಭಾಗದಲ್ಲಿ ಚದುರಂಗದಲ್ಲಿ ಧನಂಜಯ ಹೆಗಡೆ, ಕಾರ್ತಿಕ ಭಟ್ಟ, ಪನ್ನಗ ಭಟ್ಟ,  ಚೇತನ ಭಟ್ಟ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆಯಿತು. 300 ಮೀಟರ್ ಓಟದಲ್ಲಿ ಗಣೇಶ್ ಹೆಗಡೆ ತೃತೀಯ ಸ್ಥಾನ ಗಳಿಸಿದ್ದಾನೆ. ಥ್ರೋಬಾಲ್‍ನಲ್ಲಿ ಸಾರ್ವಭೌಮ ಗುರುಕುಲ ತಂಡ ಪ್ರಥಮ ಸ್ಥಾನ ಪಡೆದರೆ, ಯೋಗಾಸನದಲ್ಲಿ ರಾಘವ್ ಕೆ.ಆರ್. ಮತ್ತು ಜೀವನ ಟಿ ಪ್ರಶಸ್ತಿ ಪಡೆದರು.


ಹುಡುಗಿಯರ ವಿಭಾಗದ ಚದುರಂಗದಲ್ಲಿ ಎನ್. ತನ್ವೀಗೌರಿ ಪ್ರಥಮ ಸ್ಥಾನ ಪಡೆದರೆ, 800 ಮೀಟರ್ ಓಟದಲ್ಲಿ ಸ್ನೇಹ ಬಿ ದ್ವಿತೀಯ ಸ್ಥಾನ ಗಳಿಸಿದರು. ಗುರುಕುಲ ತಂಡ ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆಯಿತು. ಯೋಗಾಸನದಲ್ಲಿ ತನ್ಮಯಿ ಸಿ.ಎನ್.ರಾವ್, ಪವಿತ್ರಾ ತಾಂಬೆ, ಆಶ್ರಿತಾ ರಾಮಪ್ರಕಾಶ ಕೆಕ್ಕಾರ್ ಮತ್ತು ಭಾಗ್ಯಶ್ರೀ ಹೆಬ್ಬಾರ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.


ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರು ಮತ್ತು ಸಾಮೂಹಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರು.


ಸಮಗ್ರ ವೀರಾಗ್ರಣಿ ಪ್ರಶಸ್ತಿ ಭದ್ರಕಾಳಿ ಪ್ರೌಢಶಾಲೆಯ ಪಾಲಾಯಿತು. ಹುಡುಗಿಯರ ವೈಯಕ್ತಿಕ ವೀರಾಗ್ರಣಿಯನ್ನು ಭದ್ರಕಾಳಿ ಪ್ರೌಢಶಾಲೆಯ ಭಾಗ್ಯ ಗೌಡ ಪಡೆದರು ಮತ್ತು ಹುಡುಗರ ವೈಯಕ್ತಿಕ ವೀರಾಗ್ರಣಿಯನ್ನು ನೆಲಗುಣಿ ಎಮ್.ಇ.ಎಮ್.ಪ್ರೌಢಶಾಲೆಯ ರಜತ್ ಗೌಡ ಪಡೆದರು.


ಉದ್ಘಾಟನಾ ಸಮಾರಂಭ: ಕ್ರೀಡಾಕೂಟದ ಧ್ವಜಾರೋಹಣವನ್ನು ಗೋಕರ್ಣ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ಗೌಡ ನೆರವೇರಿಸಿದರು. ಅನಂತರ ಸಾರ್ವಭೌಮಗುರುಕುಲದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿ ಗಣ್ಯರಿಗೆ ಹಸ್ತಾಂತರಿಸಿದರು. ಸಾರ್ವಭೌಮ ಗುರುಕುಲದ ದೈಹಿಕ ಶಿಕ್ಷಣ ಶಿಕ್ಷಕ ಅಕ್ಷಯ ಅಡಿಗುಂಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.


ಸಾರ್ವಭೌಮ ಗುರುಕುಲಮ್ ಅಧ್ಯಕ್ಷ  ಡಿ.ಡಿ.ಶರ್ಮಾ, ಕಾರ್ಯಾಧ್ಯಕ್ಷ ಪ್ರೊ. ಎಸ್. ಎಸ್. ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಕೆನರಾ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಡಾ. ವಿ. ಆರ್. ಮಲ್ಲನ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀ ಎಸ್. ಬಿ. ನಾಯ್ಕ್, ಶಿಕ್ಷಣ ಸಂಯೋಜಕ ದೀಪಾ ಕಾಮತ್, ಭದ್ರಕಾಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಸಿ.ಜಿ. ನಾಯ್ಕ, ಭದ್ರಕಾಳಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಸಿ. ನಾಯ್ಕ, ಸಾರ್ವಭೌಮ ಗುರುಕುಲದ ಪಾರಂಪರಿಕ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ, ಸಾರ್ವಭೌಮ ಗುರುಕುಲದ ಕಾರ್ಯದರ್ಶಿ ಅಶ್ವಿನಿ ಉಡುಚೆ, ಭದ್ರಕಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ರೇವತಿ ಮಲ್ಲನ್, ಸಿ.ಆರ್.ಪಿ ಮೋಹಿನಿ ಗೌಡ, ಸಾರ್ವಭೌಮ ಗುರುಕುಲದ ಮುಖ್ಯ ಶಿಕ್ಷಕಿ ಸೌಭಾಗ್ಯಾ ಭಟ್,  ಪಿಯು ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೂರ್ಸೆ ಉಪಸ್ಥಿತರಿದ್ದರು.


ಲೋಹಿತ ಹೆಬ್ಬಾರ್ ನಿರೂಪಿಸಿದರು. ಗುರುಕುಲದ ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಸ್ವಾಗತಿಸಿದರು ಮತ್ತು ವಂದನಾರ್ಪಣೆಯನ್ನು ಸುಧನ್ವ ಶಾಸ್ತ್ರಿ ನೆರವೇರಿಸಿದರು.ಗೋಕರ್ಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ 11 ಪ್ರೌಢಶಾಲೆಗಳು ಭಾಗವಹಿಸಿದ್ದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top