ಸುರತ್ಕಲ್ ರೋಟರಿಕ್ಲಬ್ ಅಧ್ಯಕ್ಷ ಯೋಗೀಶ್ ಕುಳಾಯಿ ಮಾತನಾಡಿ ಪ್ರಕೃತಿಯೊಂದಿಗಿನ ಅನೋನ್ಯ ಸಂಬಂಧಗಳ ಅರಿವಿನೊಂದಿಗೆ ಆಟಿಯನ್ನು ಆಚರಿಸಬೇಕು ಎಂದರು.
ಸುರತ್ಕಲ್ ಇನ್ನರ್ ವೀಲ್‍ಕ್ಲಬ್‍ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್‍ಆಟಿಯ ತಿಂಗಳು ಸಾಂಸ್ಕೃತಿಕ ಸಂದರ್ಭದಲ್ಲಿ ವೈಶಿಷ್ಟ್ಯ ಪೂರ್ಣತೆಯಿಂದ ಕೂಡಿದೆ ಎಂದರು.
ಪ್ರಶಸ್ತಿ ವಿಜೇತ ಸಾಹಿತಿ ನಿರ್ಮಲಾ ಸುರತ್ಕಲ್ ಅವರನ್ನು ಸಾಹಿತ್ಯ ಸಾಧನೆಗಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು.
ರೋಟರಿ ಕ್ಲಬ್‍ನ ನಿಕಟ ಪೂರ್ವಅಧ್ಯಕ್ಷೆಯ ಶೋಮತಿ, ಇನ್ನರ್ ವೀಲ್‍ಕ್ಲಬ್‍ನ ನಿಕಟ ಪೂರ್ವಅಧ್ಯಕ್ಷೆ ಡಾ.ರೇಶ್ಮಾರಾವ್, ಕಾರ್ಯದರ್ಶಿ ಪಾವನಾ, ಪ್ರೊ. ಕೆ.ರಾಜಮೋಹನರಾವ್, ಹಿರಿಯ ಸದಸ್ಯರಾದ ಸತೀಶ್‍ರಾವ್‍ಇಡ್ಯಾ, ಎಂ.ಬಿ.ಶೆಟ್ಟಿ, ಪ್ರೊ. ಅಪ್ಪುಕುಟ್ಟನ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿಕ್ಲಬ್‍ನ ಕಾರ್ಯದರ್ಶಿ ರಮೇಶ್‍ರಾವ್ ಎಂ.ವಂದಿಸಿದರು.
ರೋಟರಿಕ್ಲಬ್ ಹಾಗೂ ಇನ್ನರ್ ವೀಲ್‍ಕ್ಲಬ್‍ನ ಸದಸ್ಯರು ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಬಗೆಯ ಖಾದ್ಯಗಳನ್ನೊಳಗೊಂಡ ‘ಆಟಿತಮ್ಮನ’ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ