ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಕನ್ನಡ ಉತ್ಸವ ಸಂಘಟನಾ ಸಮಿತಿ ರಚನೆ

Upayuktha
0

ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗಡಿನಾಡ ಕನ್ನಡ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಯು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಎಂ.ಪಿ.ಶ್ರೀನಾಥ್  ಅವರ ಅಧ್ಯಕ್ಷತೆಯಲ್ಲಿ ತಲಪಾಡಿ ವಿಶ್ವಾಸ ಸಭಾಂಗಣದಲ್ಲಿ ಜರಗಿತು.


ಮುಂದಿನ ಆಗಸ್ಟ್ ೨೬ರ ಶನಿವಾರದಂದು ಗಡಿನಾಡ ಕನ್ನಡ ಉತ್ಸವ ನನ್ನು ಇದೇ ತಲಪಾಡಿ ವಿಶ್ವಾಸ ಸಭಾಂಗಣದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.ಇದರ ಯಶಸ್ವಿಗಾಗಿ  ಸಂಘಟನಾ ಸಮಿತಿ ರೂಪೀಕರಿಸಲಾಯಿತು.


ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಮಾಡಿ ಕೈಗೊಳ್ಳಲಾಯಿತು. ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ಕವಿಗಳು ಸಾಹಿತ್ಯ ಪರಿಷತ್ತಿನ ಸದಸ್ಯರು ಊರ ನಾಗರಿಕರು ಹಾಜರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯು ಸುಬ್ಬಯ್ಯ ಕಟ್ಟೆ ಅವರ ಸ್ವಾಗತದೊಂದಿಗೆ ಆರಂಭಗೊಂಡರೆ, ಕಾಸರಗೋಡು ಸಾಹಿತ್ಯ ಪರಿಷತ್ತು ಸದಸ್ಯ ಸಮಾಜ ಸೇವಕ ಕನ್ನಡ ಹೋರಾಟಗಾರ ಕವಿ ಸಾಹಿತಿ ಜೀವಿ ಗಂಗೆನೀರು ಕಾವ್ಯನಾಮದ ಜಿ.ವೀರೇಶ್ವರ ಭಟ್ ಕರ್ಮರ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಕನ್ನಡ ಉತ್ಸವ ಸಂಘಟನಾ ಸಮಿತಿ: ಅಧ್ಯಕ್ಷರು ಎಂ.ಪಿ.ಶ್ರೀನಾಥ್ 

ಸ್ವಾಗತ ಸಮಿತಿ: ಗೌರವಾಧ್ಯಕ್ಷ ಅರಿಬೈಲ್ ಗೋಪಾಲ ಶೆಟ್ಟಿ, ವಿಶ್ವಾಸ ಆಡಿಟೋರಿಯಂ ಮಾಲಿಕರು ಸಮಾಜ ಸೇವಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮದ್ಯಪಾನ ವರ್ಜನಾ ಜನಜಾಗೃತಿ ಸಮಿತಿಯ ವಲಯ ಅಧ್ಯಕ್ಷರು ಮಂಗಳೂರು. ಅಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರು ಯು.ಕೆ.ಶೈಪುಲ್ಲಾ ತಂಗಳ್ ಉದ್ಯಾವರ,ಗಣೇಶ್ ಭಟ್ ಪ್ರಧಾನ ಅರ್ಚಕರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತಲಪಾಡಿ, ಭಾಸ್ಕರ ರೈ ಕುಕ್ಕುವಳ್ಳಿ, ಆಶಾ ದಿಲೀಪ್ ಸುಳ್ಯಮೆ ಹಾಗೂ ಆಯಿಷಾ ಪೆರ್ಲ ಸ್ವಾಗತ ಸಮಿತಿ ಸಂಚಾಲಕರು ಗುಣಾಜೆ ಶ್ರೀ ರಾಮಚಂದ್ರ ಭಟ್,ಪ್ರತಿಮಾ ಹೆಬ್ಬಾರ್ ಹಾಗೂ ಜಯಲಕ್ಷ್ಮಿ ಜಿ.

ಆರ್ಥಿಕ ಸಮಿತಿ: ದಾಮೋದರ ಶೆಟ್ಟಿ ಕುಂಜತ್ತೂರು-ಸಂಚಾಲಕರು, ಸದಸ್ಯರು ಪ್ರದೀಪ್, ರಾಜ್ ಶೇಖರ್

ಸಾಂಸ್ಕತಿಕ ಸಮಿತಿ: ಸಂಚಾಲಕರು ತೋನ್ಸೆ ಪುಷ್ಕಳ್ ಕುಮಾರ್, ನಿರ್ಮಲ್ ಭಟ್, ವಸಂತ ಬಾರಡ್ಕ್

ವೇದಿಕೆ ಸಮಿತಿ(ಸೌಂಡ್ ಆಂಡ್ ಮೈಕ್): ಪ್ರೊ.ಶ್ರೀನಾಥ್ ಕಾಸರಗೋಡು

ಉತ್ಸವ ಸಮಿತಿ: ಸಂಚಾಲಕರು ಶಶಿಕಲಾ ಸುವರ್ಣ, ಭಾಸ್ಕರ ಕಾನಾವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ತಲಪಾಡಿ

ಆರ್ಥಿಕ ಸಮಿತಿ:ಶ್ರೀ ದಾಮೋದರ ಶೆಟ್ಟಿ, ಪ್ರದೀಪ್ ಪ್ರಭಾಕರ ಕಲ್ಲೂರಾಯ ಬನದಗದ್ದೆ

ಅಲಂಕಾರ ಸಮಿತಿ: ಉದಯಕುಮಾರ್

ಶಿಸ್ತು ಸಮಿತಿ: ತ್ಯಾಗಂ ಹರೇಕಳ ಸಂಚಾಲಕರು, ಮೋಹನ ದಾಸ್ ರೈ,ಶ್ಯಾಮ ಕೃಷ್ಣ ಪ್ರಸಾದ್,ಭರತ್ ಶೆಟ್ಟಿ, ಶಿವರಾಮ ಭಟ್ ಸರವು

ರೂಪುರೇಷೆ: ಧನಂಜಯ ಕುಂಬ್ಳೆ ಮತ್ತು ರಮೇಶ್

ಸಂಯೋಜನೆ ಮತ್ತು ಸಂಚಾಲಕ: ಜಿ.ವೀರೇಶ್ವರ ಕರ್ಮರ್ಕರ್, ಫಾರೂಕ್ ಉಳ್ಳಾಲ್

ಪ್ರಚಾರ ಮತ್ತು ಮಾಧ್ಯಮ ಸಮಿತಿ:ಅಧ್ಯಕ್ಷರು ಅಚ್ಚುತ ಚೇವಾರ್,ಅಖಿಲೇಶ್ ನಗುಮೊಗಂ,ಹರೀಶ್ ಗೋಸಾಡ, ಕೃಷ್ಣ ಕುಮಾರ್ ಕಮ್ಮಾಜೆ

ಈ ಮೇಲ್ಕಂಡ ಹಲವು ಸಮಿತಿಗಳನ್ನು "ಗಡಿನಾಡ ಕನ್ನಡ ಉತ್ಸವ "ದ ಯಶ್ವಸಿಯಾಗಿಸಲು ರಚಿಸಲಾಯಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
To Top