ವಿಕೋಪ ನಿರ್ವಹಣೆ,ಪರಿಸರ,ಹವಾಮಾನ ಸಂಶೋಧನೆಯಲ್ಲಿ ಹೆಜ್ಜೆ - ಎನ್‍ಆರ್‍ಎಸ್‍ಸಿ(ಇಸ್ರೊ) ಜೊತೆ ಆಳ್ವಾಸ್ ಮಹತ್ತರ ಒಪ್ಪಂದ

Upayuktha
0

ಮಿಜಾರು (ಮೂಡುಬಿದಿರೆ): ಶೈಕ್ಷಣಿಕ ಹಾಗೂ ಬಾಹ್ಯಾಕಾಶ ಸಂಶೋಧನೆಯ ಸಹಕಾರದ ನಿಟ್ಟಿನಲ್ಲಿ ಸಹಭಾಗಿತ್ವ ನೀಡುವ ಮಹತ್ತರಒಡಂಬಡಿಕೆಗೆ ಆಳ್ವಾಸ್ ತಾಂತ್ರಿಕ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯ (ಎಐಇಟಿ) ಹಾಗೂ ಹೈದರಾಬಾದ್‍ನಲ್ಲಿರುವ ಇಸ್ರೊದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್‍ಆರ್‍ಎಸ್‍ಸಿ)ವು ಶುಕ್ರವಾರ ಇಲ್ಲಿ ಸಹಿ ಮಾಡಿತು. 


ಶಿಕ್ಷಣ, ಬಾಹ್ಯಾಕಾಶ ಸಂಶೋಧನೆ, ಹವಾಮಾನ ಮತ್ತು ಪರಿಸರ ಅಧ್ಯಯನ ಕುರಿತ ಬೆಳವಣಿಗೆಗಳನ್ನು ಈ ಒಪ್ಪಂದವು ಪ್ರೋತ್ಸಾಹಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಆರ್‍ಎಸ್‍ಸಿ ತಜ್ಞರು ಹಾಗೂ ವಿಜ್ಞಾನಿಗಳು, 'ಎನ್‍ಆರ್‍ಎಸ್‍ಸಿಯು ಹವಾಮಾನ ಮತ್ತು ಪರಿಸರಅಧ್ಯಯನ ಕುರಿತು ರಾಷ್ಟ್ರೀಯ ಮಾಹಿತಿ ವ್ಯವಸ್ಥೆ ಮಾಡುತ್ತಿದೆ' ಎಂದು ವಿವರಿಸಿದರು.  ಎನ್‍ಆರ್‍ಎಸ್‍ಸಿ- ಇಸ್ರೊ ಉಪ ನಿರ್ದೇಶಕಿ ಡಾ.ರಾಜಶ್ರೀ ವಿ. ಬೋಥಲೆ ಅವರು ಹವಾಮಾನಉಸ್ತುವಾರಿ ಮತ್ತುಅಪಾಯಅಂದಾಜು ವ್ಯವಸ್ಥೆಯನ್ನು ಕ್ರಾಂತಿಕಾರಿಗೊಳಿಸುವ 'ಮಿಂಚು ಪತ್ತೆ ಸಂವೇದಕ' (ಲೈಟ್ನಿಂಗ್‍ಡಿಟೆಕ್ಟರ್ ಸೆನ್ಸಾರ್) ಅನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, 'ಹವಾಮಾನ ಮುನ್ಸೂಚನೆ ಹಾಗೂ ವಿಕೋಪ ನಿರ್ವಹಣೆಯಲ್ಲಿದೇಶದ ಸಾಧ್ಯತೆಯನ್ನುಇದು ಹೆಚ್ಚಿಸಲಿದೆ' ಎಂದು ಅಭಿಪ್ರಾಯ ಪಟ್ಟರು. 


ಎನ್‍ಆರ್‍ಎಸ್‍ಸಿ ಹಾಗೂ ಇಸ್ರೊಗೆ ಕೃತಜ್ಞತೆ ಸಲ್ಲಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, 'ಬಹುಶಿಸ್ತೀಯ ಆಯಾಮಗಳ ಮೂಲಕ ಆಳ್ವಾಸ್ ಸಂಶೋಧನಾತ್ಮಕ ಕ್ಷೇತ್ರಗಳಲ್ಲಿ ಹೆಜ್ಜೆಇಡುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಸಂಶೋಧನೆಯು ಬಹುಮುಖ್ಯವಾಗಿದೆ. ಆದರೆ, ಸಾರ್ವಜನಿಕರ ಮುಂದೆ ಸಂಶೋಧನೆಯ ಫಲವನ್ನು ಪ್ರದರ್ಶಿಸದಿದ್ದರೆ, ಅವು ಅನುಷ್ಠಾನಗೊಂಡು ಮುಖ್ಯವಾಹಿನಿಗೆ ಬರುವುದಿಲ್ಲ' ಎಂದರು. ಜಿಎನ್‍ಎಸ್‍ಎಸ್, ಎಲ್‍ಡಿಎಸ್ ಮತ್ತುಎಡಬ್ಲ್ಯೂಎಸ್ ಗಳನ್ನು ಆಳ್ವಾಸ್‍ನಲ್ಲಿ ಸ್ಥಾಪಿಸಿದಕ್ಕಾಗಿ ಎನ್‍ಆರ್‍ಎಸ್‍ಸಿ ಮತ್ತು ಆರ್‍ಆರ್‍ಎಸ್‍ಸಿಗೆ ಅವರು ಕೃತಜ್ಞತೆ ಸಲ್ಲಿಸಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಈ ಒಪ್ಪಂದವು ಪರಿಸರ ಹಾಗೂ ಅದರ ಸವಾಲುಗಳನ್ನು ನಿರ್ವಹಿಸಲು ಸಹಕಾರಿಯಾಗಲಿದೆಎಂದರು. ಖ್ಯಾತ ಹವಾಮಾನ ವಿಜ್ಞಾನಿ ಅಲೋಕ್‍ತೌರಿ ಮತ್ತು ಸಿ. ಜಯಶ್ರೀ, ಎಐಇಟಿ   ಯೋಜನಾಡೀನ್‍ ಡಾ. ದತ್ತಾತ್ರೇಯ, ಸಂಶೋಧನೆ ಮತ್ತು ಡೆವೆಲಪ್‍ಮೆಂಟ್ ಸೆಲ್‍ನ ಡೀನ್‍ ಡಾ. ಪಿಂಟೊ ಇದ್ದರು. 


ಲೈಟ್ನಿಂಗ್‍ ಡಿಟೆಕ್ಟರ್ ಸೆನ್ಸಾರ್ ವಿಶೇಷತೆ: 

ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ ಪ್ರಪ್ರಥಮ ವ್ಯವಸ್ಥೆ

340 ಕಿಮೀ ವ್ಯಾಪ್ತಿಯಲ್ಲಿ ಮಿಂಚು ಪತ್ತೆ ಮಾಡುವ ಸೆನ್ಸಾರ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top