ಉಜಿರೆ: ಸ್ವಾತಿ ಫಡ್ಕೆ ಎನ್, ಇವರು ಕೆಂಜಾರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕಿ ಡಾ. ವಿಜಯಾ ಡಿ.ಪಿ. ಆಳ್ವ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ ಎ ಸ್ಟಡಿ ಒನ್ ದ ಕೊರೋಶನ್ ಇನ್ಹಿಬಿಷನ್ ಆಫ್ ಇಂಡಸ್ಟ್ರಿಯಲಿ ಇಂಪಾರ್ಟೆಂಟ್ ಸ್ಟೀಲ್ ಬೈ ಸಿಂಥೆಟಿಕ್ ಹೆಟೆರೋಸೈಕ್ಲಿಕ್ ಕಂಪೌಂಡ್ಸ್ ಎನ್ನುವ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ, ಇಲ್ಲಿನ ಡಾಕ್ಟರೇಟ್ ಪದವಿ ಪಡೆದಿದ್ದು, ವಿಶ್ವವಿದ್ಯಾನಿಲಯದ 23 ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಗಣೇಶ ಶೆಂಡ್ಯೆಯವರ ಪತ್ನಿ. ಮುಂಡಾಜೆ ಗ್ರಾಮದ ಮಲ್ಲಿಕಟ್ಟೆಯ ವೀಣಾ ಮತ್ತು ನಾಗರಾಜ ಫಡ್ಕೆಯವರ ಪುತ್ರಿ, ಹಾಗೂ ಭಂಡಿಹೊಳೆಯ ಸುವರ್ಣಲತಾ ವಿಷ್ಣು ಶೆಂಡ್ಯೆಯವರ ಕಿರಿಯ ಸೊಸೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ