ಭಜನಾ ಮಂದಿರದ ಪುನರ್ ನಿರ್ಮಾಣ

Upayuktha
0


ಸಾಂಪ್ರದಾಯಿಕ ಕಲೆಗಳ  ಬೀಡು ಕರಾವಳಿ ತೀರದ ನಾಡು – ಮಂಗಳೂರು. ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯ ಹೋರಾಟವು ಪ್ರತಿ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಕಡಬ ತಾಲೂಕಿನ ಆಲಂತಾಯದಲ್ಲಿ ಪ್ರಾರಂಭಗೊಂಡ ಶ್ರೀರಾಮ ಭಜನಾ ಮಂದಿರ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು.


ಅಯೋಧ್ಯೆಯ ಕಾಲಾಂತರದಲ್ಲಿ ಬಾರಿಸುತ್ತಿದ್ದ ಗಂಟೆಯ ಶಬ್ದವು ಕೆಲವು ವರ್ಷಗಳಿಂದ ಸ್ತಬ್ಧಗೊಂಡಿತು. ಎಷ್ಟೋ ಸಂಸ್ಕೃತಿಗಳಿಗೆ ಜನ್ಮ ನೀಡಿದ ಭೂಮಿಯಲ್ಲಿ ಎಲ್ಲೋ ದೂರದಲ್ಲೊಂದು ಭಜನಾ ಮಂದಿರದ ಅಳಲಿನ ಕೂಗು ಕಿವಿತಟ್ಟಿತು. ಇದನ್ನು ಗಮನಿಸಿದ ಈ ಭಾಗದ ಮಕ್ಕಳು ಭಜನಾ ಮಂದಿರವನ್ನು ಸ್ವಚ್ಛಗೊಳಿಸಿ, ಭಜನೆಯನ್ನು ಪ್ರಾರಂಭ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾದರು.


ಕಲೆಯು ಅಳಿಯುತ್ತಿದೆ, ಸಂಸ್ಕೃತಿಯು ಉರುಳುತ್ತಿದೆ, ಆದರೆ ಅಲ್ಲಿನ ಜೀವಗಳು ಉಳಿವಿಗಾಗಿ ಪರದಾಟ ನಡೆಸುತ್ತಿದ್ದಾರೆ. ಆ ಮಕ್ಕಳ ಪ್ರತಿಬಿಂಬವಾಗಿ ಕೈಲಾಸದಿಂದ ದೇವರೇ ಧರೆಗಿಳಿದು ಭಜನಾ ಮಂದಿರದ ಮರು ನಿರ್ಮಾಣ ಮಾಡಿದ್ದಾರೆಂದು ಊರಿನ ಜನತೆ ನಂಬಿದರು ಹಾಗೂ ಹಿರಿಯರೆಲ್ಲರೂ ಗೌರವದಿಂದ ಭಜನೆಗೆ ಸಾಥ್ ನೀಡಿದರು.


ನಿರ್ಜೀವ ಸ್ಥಿತಿಯಲ್ಲಿದ್ದ ಆಲಂತಾಯ ಶ್ರೀರಾಮ ಭಜನಾ ಮಂದಿರವನ್ನು ಪುನಃ ಜೀವ ತುಂಬಿಸುವುದರ ಮೂಲಕ ನೂತನ ಪದಾಧಿಕಾರಿಯನ್ನು ಆಯ್ಕೆ ಮಾಡಿ ವಾರದ ಭಜನೆ, ನಗರ ಭಜನೆಯನ್ನು ಮಾಡುವ ಮೂಲಕ ಯಶಸ್ವಿಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಹಲವಾರು ಜನತೆಯ ಸಹಕಾರದೆಡೆ ಯಶಸ್ವಿಯಾಗಿ ಮರು ಪ್ರಾರಂಭಗೊಂಡಿತು.


ಅದೇ ರೀತಿ ಮುಂದಿನ ಯೋಜನೆಯಾದ "ಮಕ್ಕಳ ಕುಣಿತಾ ಭಜನ ತಂಡ" ಮಾಡಲು ನಿರ್ಧರಿಸಿದ್ದು ಅದಕ್ಕೆ ಸ್ಥಳಾವಕಾಶದ ಕೊರತೆ ಅಡಚಣೆಯಾಗಿತ್ತು. ಆದರೆ ಹಿಡಿದ ಹಠ ಬಿಡದೆ ಭಜನಾ ಮಂದಿರವನ್ನು ವಿಸ್ತಾರಗೊಳಿಸುವ ಕಾರ್ಯವನ್ನು ಮಾಡಿ,ವಿಸ್ತರಣಾ ಕಾಮಗಾರಿಯು ಪೂರ್ಣಗೊಂಡಿದ್ದು, ದೇವತಾ ಕಾರ್ಯದೊಂದಿಗೆ ಹಾಗೂ ಆಹ್ವಾನಿತ ಭಜನಾ ತಂಡದಿಂದ ಭಜನಾ ಸೇವೆಯ ಮೂಲಕ ಲೋಕಾರ್ಪಣೆಗೊಂಡಿತು.


'ಮನಸಿದ್ದರೆ ಮಾರ್ಗ ' ಎಂಬ ನುಡಿಯಂತೆ ಪಣತೊಟ್ಟ ಭಜನಾ ಮಂದಿರದ ಕಾರ್ಯವನ್ನು ಈಡೇರಿಸಿಯೇ ತಿರುವೆವು ಎಂಬುದರ ಮೂಲಕ ಯಶಸ್ವಿಗೊಂಡರು. 'ಪರಿಶ್ರಮಕ್ಕೆ ತಕ್ಕ ಫಲ' ಎಂಬಂತೆ ಊರಿನವರು ಹಾಕಿದ ಪರಿಶ್ರಮವೇ ಅಲಂತಾಯದ ಶ್ರೀರಾಮ ಭಜನಾ ಮಂದಿರದ ಮರು ನಿರ್ಮಾಣ. ಬೇರೆಯವರ ಚಿಂತೆ ನಮಗೆ ಎನ್ನುವ ಕಾಲದಲ್ಲಿ 'ಒಗ್ಗಟ್ಟಿನಲ್ಲಿ ಬಲವಿದೆ'  ಎನ್ನುವ ಮೂಲಕ ಊರಿನವರು ನಿಷ್ಕಲ್ಮಶ ಮನಸ್ಸಿನಿಂದ ಭಜನಾ ಮಂದಿರಕ್ಕೆ ಜೀವ ನೀಡಿದರು. ಬೆಳಕಿಗೆ ತೋರದ ನಿಮ್ಮ ನಿಷ್ಕಲ್ಮಶ ಹೃದಯಕ್ಕೆ ನನ್ನದೊಂದು ಸಲಾಂ.

ಬರಹ : ಕೀರ್ತನ ಒಕ್ಕಲಿಗ ಬೆಂಬಳೂರು

ದ್ವಿತೀಯ ಬಿ ಬಿ ಎ 

ವಿವೇಕಾನಂದ ಕಾಲೇಜು ಪುತ್ತೂರು

                                                                               


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top