ಗಾಂಧಿ ಜಯಂತಿ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Upayuktha
0

ಬೆಂಗಳೂರು: ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ಇವರು ಗಾಂಧೀಜಿ ಅವರ 154ನೇ  ಜಯಂತಿ ನಿಮಿತ್ತ ಕೆಳಗೆ ಕಾಣಿಸಿದ ಯಾವುದೇ ಒಂದು ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

 

ಗಾಂಧಿ ನಮಗೆಷ್ಟು ಬೇಕು ?

ಗಾಂಧಿ ನಂತರದ ಭಾರತ- ನಡೆದಿದ್ದು , ಎಡವಿದ್ದು , ಎಲ್ಲಿ? ಹೇಗೆ ?

ಗಾಂಧಿ ಇಂದಿಗೂ ಪ್ರಸ್ತುತ -  ಏಕೆ ? ಹೇಗೆ ?

ಯುವಜನರಿಗೆ ಗಾಂಧಿಯನ್ನು ತಲುಪಿಸುವುದು ಹೇಗೆ ?

ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧಿ ನಿಂದನೆ - ಪರಿಹಾರ ಮಾರ್ಗಗಳು ?

ಎಲ್ಲರೂ ಸರಿ. ಆದರೆ ಯಾವುದೂ ಸರಿ ಇಲ್ಲ  -ಪ್ರಸಕ್ತ ಸ್ಥಿತಿ - ಗತಿಗಳ ಸಮೀಕ್ಷೆ


ಐದು ನೂರು ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಬರಹಗಳನ್ನು ಆಯೋಜಕರು ,ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ,  ಕರ್ನಾಟಕ ರಾಜ್ಯ ಸರ್ವೋದಯ ಮಂಡಲ, ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ,


ಬೆಂಗಳೂರು-  560001 ಈ ವಿಳಾಸಕ್ಕೆ  ಅಥವಾ sarvodayasuresh @gmail.com ಗಾಗಲಿ 2023 ಸೆಪ್ಟೆಂಬರ್15 ರ ಒಳಗೆ ಕಳುಹಿಸಲು ಕೋರಿದೆ.  ಯಾವುದೇ ವಯಸ್ಸಿನ ಮಿತಿ ಇಲ್ಲ ; ಬರೆದವರ ಪೂರ್ತಿ ವಿಳಾಸ ,ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ಕಳುಹಿಸಬೇಕು ; ಉತ್ತಮ ಬಹುಮಾನಿತ ಬರಹಗಳನ್ನು ಯಥಾವಕಾಶ ಪ್ರಕಟಿಸಲಾಗುವುದು. ವಿವರಗಳಿಗೆ 94480 27400 (ಸುರೇಶ್),99013 77911 (ದೊಡ್ಡಯ್ಯ),90356 18076 (ಗುರುರಾಜ್) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top