ಬೆಂಗಳೂರು: ನಾಟ್ಯ ನಿನಾದ ನೃತ್ಯ ಅಕಾಡೆಮಿಯ ಸಂಸ್ಥಾಪಕರೂ, ನಿರ್ದೇಶಕರೂ ಆದ ಧರಣಿ ಕಶ್ಯಪ್ ಅವರು ಆಗಸ್ಟ್ 12ರಂದು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "ಅರ್ಧ ನಾರೀಶ್ವರ ನೃತ್ಯೋತ್ಸವ" ದಲ್ಲಿ ನೂಪುರ ಫೈನ್ ಆರ್ಟ್ಸ್ ಅಕಾಡೆಮಿಯ ರೂಪ ರಾಜೇಶ್ ಹಾಗೂ ಜತಿನ್ ಅಕಾಡೆಮಿ ಆಫ್ ಡ್ಯಾನ್ಸ್‌ನ ಅರ್ಚನಾ ಪುಣ್ಯೇಶ್, ಸುನೀತ ಮಂಜುನಾಥ್, ಕು. ನಿತ್ಯಾ ಮತ್ತು ಕು. ಅಮೃತವರ್ಷಿಣಿ ಇವರುಗಳು ಭಾಗವಹಿಸಿದ್ದರು.
ಗಾಂಧಿ ಸ್ಮರಣೆ ಮತ್ತು ಭಾರತಾಂಬೆ ಕವಿತೆಗಳನ್ನು ನೃತ್ಯದಲ್ಲಿ ಅಳವಡಿಸಿದ್ದು ಒಂದು ವಿಶೇಷ ಪ್ರಯೋಗವಾಗಿತ್ತು.
ಸುನಂದಾದೇವಿ ಮತ್ತು ಅರುಂಧತಿ ರಮೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎ.ವಿ. ಸತ್ಯನಾರಾಯಣ ಕಾರ್ಯಕ್ರಮದ ನಿರೂಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ