ಅಂಬಿಕಾ ವಿದ್ಯಾಸಂಸ್ಥೆ ಬಪ್ಪಳಿಗೆ ಇಲ್ಲಿ ನಡೆದ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” ಎಂಬ ಕಾರ್ಯಕ್ರಮ ದಲ್ಲಿ ಮಾತನಾಡಿದ ಇವರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಅದು ಸಾಧ್ಯವಾದದ್ದು ಮಾತ್ರ ಸ್ವಾತಂತ್ರ್ಯ ದೊರೆತ ನಂತರವೇ ಎನ್ನುವುದು ವಿಷಾದಕರ ಸಂಗತಿ. ಅದರ ಪರಿಣಾಮವನ್ನು ದೇಶ ಇಂದಿಗೂ ಅನುಭವಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜರವರು ವಹಿಸಿದ್ದರು. ಅಂಬಿಕಾ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜನಿ ಬೋರ್ಕರ್ ರ್ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಮಾರಿ ಪ್ರಿಯಾಶ್ರೀ ಕೆ. ಎ ಸ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ