ಆ.13ರಂದು ಮಂಗಳೂರು ಪುರಭವನದಲ್ಲಿ ಆಟಿಡೊಂಜಿ ದಿನ

Upayuktha
0

ಆಮಂತ್ರಣ ಪತ್ರ ಬಿಡುಗಡೆ




ಮಂಗಳೂರು: ಕರ್ನಾಟಕ ಜಾನಪದ ಪರಿಷತ್ ದ.ಕ ಘಟಕ ಹಾಗೂ ಆಮಂತ್ರಣ ಪರಿವಾರ ವತಿಯಿಂದ ಆ.13 ಮಂಗಳೂರು ಪುರಭವನದಲ್ಲಿ ಜರಗುವ ಆಟಿಡೊಂಜಿ ದಿನ ಸಮಾರಂಭದ ಆಮಂತ್ರಣ ಪತ್ರಿಕೆ ಆ.6ರಂದು ಮಂಗಳೂರಿನಲ್ಲಿ ಬಿಡುಗಡೆಗೊಂಡಿತು.


ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಟಿಪೇಶ್. ಎಸ್. ಅಮೀನ್ ಅದ್ಯಪಾಡಿ, ಜಾನಪದ ಪರಿಷತ್ ಸದಸ್ಯರು (ದ.ಕ) ಮಂಗಳೂರು, ಅಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ದಿನೇಶ್ ಶೆಟ್ಟಿ ಕೊಂಚಾಡಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ಪ್ರಸಾದ್ ನಾಯಕ್, ಕಾರ್ಕಳ, ಅಜಿತ್ ಪಂಚರತ್ನ ಅಳದಂಗಡಿ ಉಪಸ್ಥಿತರಿದ್ದರು.


ಆ.13ರಂದು ನಡೆಯುವ ಸಮಾರಂಭವನ್ನು ಮಂಗಳೂರು ಕ್ಷೇತ್ರದ ಶಾಸಕರಾದ ಸನ್ಮಾನ್ಯ ವೇದವ್ಯಾಸ್ ಕಾಮತ್ ಉದ್ಘಾಟಿಸಲಿದ್ದು ನಿರ್ದೇಶಕ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ರಾಗ ತರಂಗ ಸಂಸ್ಥೆಯ ಅಧ್ಯಕ್ಷೆ ಆಶಾ ಹೆಗ್ಡೆ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು, ಕರ್ನಾಟಕ ಜಾನಪದ ಪರಿಷತ್ ಮಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸ್,ಯುವ ಉದ್ಯಮಿ ಸದಾನಂದ ಎಂ.ನಾವರ, ಚಲನಚಿತ್ರ ನಟ ಸೂರಜ್ ಸನಿಲ್, ಜೈ ತುಲುನಾಡು ಸಂಸ್ಥೆಯ ಅಧ್ಯಕ್ಷ ವಿಶು ಶ್ರೀಕೇರ, ಮಂಗಳೂರು Boy Zone ಡಾನ್ಸ್ ಅಕಾಡೆಮಿಯ ಕಿಶೋರ್, ದ.ಕ ಜಿಲ್ಲಾ ಶಾಮಿಯಾನ ಸಂಘ ಬೆಳ್ತಂಗಡಿ ಘಟಕ ಅಧ್ಯಕ್ಷ ಸುಕೇಶ್ ಜೈನ್  ಹಾಗೂ ಹಲವಾರು ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರದಲ್ಲಿ ವಿವಿಧ ಆಕರ್ಷಕ ಆಟಗಳು, ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯ ಪಡಿಸಿರುವ ತಾಯಂದಿರಿಗೆ ಸನ್ಮಾನ ಹಾಗೂ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಸೂಕ್ತ ನ್ಯೂಸ್ ಮತ್ತು ಕಲಾ ಪ್ರತಿಭೆಗಳು ಕಾರ್ಕಳ, ಟೀಮ್ ಗಾನಯಾನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಮಾಡಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top