ನದಿಯ ಮಧ್ಯೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಾಲಿಗ್ರಾಮ ಕಯಾಕಿಂಗ್ ತಂಡ

Upayuktha
0


ಸಾಲಿಗ್ರಾಮ: 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭ ಗಳಿಗೆಯಲ್ಲಿ ರಾಷ್ಟ್ರ ಪ್ರೇಮವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರ ಪ್ರತೀ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಪಣ ತೊಟ್ಟು ದುಡಿದರೆ ಸಾಲಿಗ್ರಾಮದ ಕಯಾಕಿಂಗ್ ತಂಡ ವಿಭಿನ್ನವಾಗಿ ರಾಷ್ಟ್ರ ಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ನಮ್ಮ ಸಾಲಿಗ್ರಾಮ ಕಯಾಕಿಂಗ್ ತಂಡ ಇದೀಗ ಈ ವಿಭಿನ್ನ ಪ್ರಯತ್ನ ನಡೆಸಿದೆ.


ಕಳೆದ ಬಾರಿ ಸೀತಾ ನದಿಯ ಮದ್ಯದಲ್ಲಿ ಕಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜ ಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ ತಂಡ ಈ ಬಾರಿ ನದಿಯ ಮದ್ಯದಲ್ಲಿ ಮರದ ಸೇತುವೆ ರಚಿಸಿ ಧ್ವಜಾರೋಹಣ ಮಾಡಿ ಅನ್ನವಿತ್ತ ಪ್ರಕೃತಿಯಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿದೆ. ನಿವೃತ್ತ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್     ಚಂದ್ರಶೇಖರ್ ನಾವಡ ಇವರು ಧ್ವಜಾರೋಹಣಗೈದು ಮಾತನಾಡಿ ಯುವಕರ ಕಾರ್ಯ ಪ್ರಶಂಸನೀಯ, ಪ್ರತೀ ಬಾರಿಯೂ ನವೀನ ಆಲೋಚನೆಗಳ ಮೂಲಕ ಕಾರ್ಯ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದ್ದರೆ ಎಂದರು.


ಪ್ರಕೃತಿ ಮಡಿಲಲ್ಲಿ ಭಾರತಾಂಬೆಯನ್ನು ನಿಲ್ಲಿಸಿ ಜನರಿಗೆ ಪ್ರಕೃತಿ ಪ್ರೇಮದ ಜೊತೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಲು ಸಂದೇಶ ನೀಡಿದರು. ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್ & ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top