77ನೇ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯಗಳು. ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ಸ್ವಾತಂತ್ರ್ಯ ಆಚರಿಸಲಾಗುತ್ತದೆ. ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನವಿದು. ನಮ್ಮ ಪ್ರೀತಿಯ ಮಾತೃಭೂಮಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ವೀರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದಿನವಾಗಿದೆ.
ಸ್ವಾತಂತ್ರ್ಯ ದಿನ ಕೇವಲ ಆಗಸ್ಟ್ 15ಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆ ವರ್ಷಕ್ಕೊಮ್ಮೆ ಬಂದರೂ ನಾವು ನಮ್ಮ ಸಂವಿಧಾನದ ಕಾನೂನಿಗೆ ಒಳಪಟ್ಟು ಪ್ರತಿ ದಿನ ಸ್ವಾತಂತ್ರ್ಯ ಹೊಂದಿರುತ್ತೇವೆ. ಆಗಸ್ಟ್ 15 ಎಲ್ಲರಿಗೂ ಹಬ್ಬದ ದಿನವಾಗಿದೆ. ತ್ರಿವರ್ಣ ಧ್ವಜವನ್ನು ಆರಿಸಿ ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಿ ಅದ್ದೂರಿಯಿಂದ ಈ ಹಬ್ಬವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯ ದಿನಾಚರಣೆ ದೇಶದ ಏಕತೆ ಎತ್ತಿ ತೋರಿಸುವ ದಿನವಾಗಿದೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಉತ್ತಮ ರೀತಿಯ ಸಂತೋಷದ ಅವಕಾಶವೇ ಸ್ವಾತಂತ್ರ್ಯ ಎಂದು ಹೇಳಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶ ಹೇಗೆ ಇತ್ತು? ಸ್ವಾತಂತ್ರ್ಯ ನಂತರ ಭಾರತ ಹೇಗೆ ಇದೆ ನಮ್ಮ ಇತಿಹಾಸ ನೋಡಿದಾಗ ಗೊತ್ತಾಗುತ್ತದೆ. ಹಿಂದೆ ಬ್ರಿಟಿಷರ ಕೈಗೊಂಬೆ ಆಗಿದ್ದ ಭಾರತೀಯರು ಸ್ವಾತಂತ್ರ್ಯ ನಂತರ ತನ್ನದೇ ಸ್ವಂತ ಯೋಚನೆ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ನಮ್ಮ ಸಂವಿಧಾನ ಕಾನೂನುಗಳನ್ನು ನಮಗೆ ಸ್ವಾತಂತ್ರ್ಯ ನೀಡಿದರೂ ಕೆಲವು ಬಲಾಢ್ಯ ಶಕ್ತಿಗಳು ನಮ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ. ಕೆಲವೊಂದು ಸಲ ಸ್ವಾತಂತ್ರ್ಯ ಹೆಚ್ಚಾಗಿ ದೇಶದಲ್ಲಿ ನಡೆಯಬಾರದ ಕೆಲಸ ನಡೆದು ಹೋಗುತ್ತದೆ. ವೀರರ ತ್ಯಾಗ ಬಲಿದಾನದ ಜೊತೆಗೆ ಇತಿಹಾಸವನ್ನು ಮರೆಯಬಾರದು, ವ್ಯಾಪಾರದ ನೆಪದಲ್ಲಿ ಯಾರಿಗೂ ಮತ್ತೆ ಆಡಳಿತ ನಡೆಸಲು ಅವಕಾಶ ನೀಡಬಾರದು ಮತ್ತು ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದು ಈ ಹಬ್ಬವು ನೆನಪಿಸುತ್ತದೆ. ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿಯೊಬ್ಬರಿಗೂ ವಿಭಿನ್ನ ವಿಧಾನಗಳಿದ್ದರೂ ಅವರ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ದೇಶದ ಜನತೆ ಎಲ್ಲರೂ ಒಟ್ಟಾಗಿ ಒಂದು ದಿನವನ್ನು ಸಂಭ್ರಮದಿಂದ ಆಚರಿಸೋಣ.
-ಜಯಶ್ರೀ ಸಂಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ