ಮಕ್ಕಳಾಟ: ಉಪ್ಪು ನೀರ ಕಡಲ ತೀರದಲ್ಲಿ ಮರಳಿನಾಟ

Upayuktha
0


ಮುದ್ರ ನೀರು ಉಪ್ಪಾಗಿರಬಹುದು ಆದರೆ ಸಮುದ್ರದ ನೀರಿನ ಜೊತೆ  ಆಟ ಆಡುವುದು ಯಾರಿಗೆ ಇಷ್ಟವಿಲ್ಲ ಹೇಳಿ! ಬಾಲ್ಯದಲ್ಲಿ ಸಮುದ್ರವನ್ನು ನೋಡಲು ಹೋಗುವಾಗ  ಗಮ್ಮತ್ತೆ  ಬೇರೆ ಎನ್ನಬಹುದು. ಮಗುವಾಗಿದ್ದಾಗ ಸಮುದ್ರದ ನೀರಿನ ಆಟವಾಡಿದ್ದು, ಸಮುದ್ರದ ಮರಳು ಇರುವ ಜಾಗದಲ್ಲಿ ಹೊಂಡ ತೆಗೆಯುವುದು ತೆಗೆದ ಅದರಲ್ಲಿ ನೀರು ನೋಡಿ ಹರುಷ ಪಟ್ಟ ದಿನಗಳು ನೆನಪಾದವು, ಸಮುದ್ರದ ತೀರದಲ್ಲಿರುವ ಒಂಟೆ ಮತ್ತು ಕುದುರೆಗಳ ಸವಾರಿ ಅದ್ಭುತವಾದ ಅನುಭವ ನೀಡಿತ್ತು. ಸಮುದ್ರದ ಅಲೆಗಳು ಕಾಲಿಗೆ ಬಂದು ಅಪ್ಪಳಿಸಿದಾಗ ಸಮುದ್ರದ ಮುಂದಕ್ಕೆ ಹೋದ ಅನುಭವಗಳು ಖುಷಿ ನೀಡುತ್ತಾ ಇತ್ತು.


ಆದರೆ ಇತ್ತೀಚಿನ ಮಕ್ಕಳು ಆಟವಾಡಲು ಹೋಗುವ ಸಂದರ್ಭದಲ್ಲಿ ಹಲವಾರು ಪ್ಲಾಸ್ಟಿಕ್ ಗಳನ್ನು ಸೇರಿಸಿ ಬಿಟ್ಟು ಹೋಗುತ್ತಾರೆ. ಇದರಿಂದ ಹಲವಾರು ಸಮುದ್ರದ ಜೀವ ಚರಗಳಿಗೆ ತೊಂದರೆಯಾಗುತ್ತಾ ಇದೆ. ಮಕ್ಕಳು ಮಾತ್ರವಲ್ಲದೆ ಇತ್ತೀಚಿನ ಯುವ ಸಮುದಾಯವು ಈ ಇದರಿಂದ ಏನು ಹೊರತಾಗಿಲ್ಲ. ಆದರೆ ಕೆಲವೊಂದು ಟ್ರಸ್ಟ್ ಗಳು ಸಮುದ್ರದ ತಾಜ್ಯ ವಿಲೇವಾರಿಯಲ್ಲಿ ತಮ್ಮ ಪಾತ್ರವನ್ನು ವಹಿಸಿರುವುದು ಸ್ವಾಗತಾರ್ಹವೇ ಸರಿ.

-ದೇವಿಶ್ರೀ ಶಂಕರಪುರ  


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top