ಕರಾವಳಿಯ ಹೆಮ್ಮೆಯ ಹುಣ್ಣಮೆ ಚಂದ್ರಲೇಖ

Upayuktha
0

 


“ಕಾಂತಾರ” ಸಿನಿಮಾದಲ್ಲಿ ‘ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ’ ಎಂಬ ಡೈಲಾಗ್ ನಿಂದ ಚಿಕ್ಕ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡ ನಮ್ಮ ಕರಾವಳಿಯ ಹೆಮ್ಮೆಯ ನಟಿ ಚಂದ್ರಕಲಾ ರಾವ್ ಕದಿಕೆ.


ಉಡುಪಿ ಜಿಲ್ಲೆಯ ಕದಿಕೆಯ ಬಡನಿಡಿಯೂರು ಗ್ರಾಮದ ದಿ. ಟಿ. ಕೇಶವ ರಾವ್ ಹಾಗೂ ಶಾರದರವರ ಮುದ್ದಿನ ಎಂಟನೇ ಮಗಳಾಗಿ 01.01.1986ರಂದು ಚಂದ್ರಕಲಾ ರಾವ್ ಕದಿಕೆ ಅವರ ಜನನ. ಇವರು ನೃತ್ಯದ ಮೂಲಕ ವೇದಿಕೆಗೆ ಪಾದಾರ್ಪಣೆ ಮಾಡಿದರು. ಎಂಟನೇ ತರಗತಿಯಲ್ಲಿ ನಾಟಕ ರಂಗವನ್ನು ಪ್ರವೇಶಿಸಿದರು. ಇವರ ಮೊದಲನೇ ನಾಟಕ ಬೈರನ ಬದುಕು.


ನಾಟಕ ರಂಗಕ್ಕೆ ಪರಿಚಯಿಸಿದವರು ವಾಸು ಮಾಸ್ಟರ್ ಎನ್ನುವವರು. 2000ನೇ ಇಸವಿಯಲ್ಲಿ ನಾಟಕ ರಂಗಕ್ಕೆ ಪ್ರವೇಶ ಮಾಡಿದರು. ನಂತರ ಉಡುಪಿ ರಂಗಭೂಮಿಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು.

ನಂತರದ ದಿನಗಳಲ್ಲಿ ನಾಟಕ ರಂಗವನ್ನೇ ತನ್ನ ಕಾಯಕ ವೃತ್ತಿಯಾಗಿಸಿಕೊಂಡರು. 500ಕ್ಕಿಂತಲು ಜಾಸ್ತಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.


ಒಂದು ಪಾತ್ರದ ಬಗ್ಗೆ ನಟನೆ ಮಾಡುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ:-

ಪಾತ್ರದ ಬಗ್ಗೆ ಮೊದಲೇ ಯಾರಾದರೂ ಹೇಳಿದರೆ ನನಗೆ ಕೊಟ್ಟ ಪಾತ್ರದ ಬಗ್ಗೆ ತಿಳಿದು ಅದಕ್ಕೆ ಎಷ್ಟು ಬೇಕೋ ಅಷ್ಟು ತಯಾರಿಯನ್ನು ಮೊದಲೇ ಮಾಡಿಕೊಳ್ಳುತ್ತೇನೆ.


ನಾಟಕದ ಅಭಿನಯ ಮತ್ತು ಚಿತ್ರರಂಗದ ಅಭಿನಯಕ್ಕೆ ಇರುವ ವ್ಯತ್ಯಾಸ:-

ಮೊದಲನೆಯದಾಗಿ ನಾನು ರಂಗಭೂಮಿಗೆ ತಲೆಬಾಗುತ್ತೇನೆ. ಚಿತ್ರರಂಗದಲ್ಲಿ ಸ್ಪಾಟ್ (spot) ಡೈಲಾಗ್ ಗಳು ಇರುತ್ತವೆ. ಡೈಲಾಗ್ ಹೇಳಿ ಅಲ್ಲಿಯೇ ಮರೆತು ಬಿಡುತ್ತೇವೆ. ಆದರೆ ನಾಟಕ ರಂಗದಲ್ಲಿ 1 ತಿಂಗಳ ತನಕ ಪ್ರಾಕ್ಟೀಸ್ ಮಾಡಿ ನೆನಪಿಟ್ಟುಕೊಳ್ಳುತ್ತೇವೆ. ಕೇವಲ ನನ್ನ ಪಾತ್ರ ಮಾತ್ರವಲ್ಲದೆ ಇಡೀ ನಾಟಕವನ್ನೇ ನೆನಪಿಟ್ಟುಕೊಳ್ಳುತ್ತೇವೆ, ಎದುರು ಪಾತ್ರಧಾರಿಯ ಅಭಿನಯ ಮತ್ತು ನನ್ನ ಅಭಿನಯ ಸರಿಸಮಾನವಾಗಿರಬೇಕು. ಯಾಕಂದರೆ ಆ ಪಾತ್ರಧಾರಿ ಏನಾದ್ರೂ ತಪ್ಪಿದರೆ ಅದನ್ನು ಸರಿಪಡಿಸಿಕೊಂಡು ಹೋಗಲು ನಮಗೆ ತಿಳಿದಿರಬೇಕು. ಹಾಗಾಗಿ ನಾಟಕರಂಗದಲ್ಲಿ ಕಲಿಯಲು ತುಂಬಾ ಇದೆ. ನಾಟಕದಲ್ಲಿ 2-3 ಗಂಟೆ ಹೊತ್ತು ಪಾತ್ರವನ್ನು ಮಾಡಬೇಕಾಗುತ್ತದೆ. ಆದರೆ ಸಿನಿಮಾದಲ್ಲಿ ರೆಸ್ಟ್ ಇರುತ್ತದೆ.


ಕಾಂತಾರ ಸಿನಿಮಾಕ್ಕಿಂತ ಮೊದಲು ಹೇಗೆ ಜನರು ಗುರುತಿಸಿಕೊಳ್ಳುತ್ತಿದ್ದರು ಹಾಗೂ ಈಗ ಹೇಗೆ ಗುರುತಿಸಿಕೊಳ್ಳುತ್ತಿದ್ದಾರೆ:-

ಕಾಂತಾರಕ್ಕಿಂತ ಮೊದಲು ಜನರು ಗುರುತಿಸಿಕೊಳ್ಳುತ್ತ ಇರ್ಲಿಲ್ಲ. ಸರಸಮ್ಮನ ಸಮಾಧಿ ಚಂದನದಲ್ಲಿ ಬರುತ್ತಿತ್ತು. ಉಳಿದವರು ಕಂಡಂತೆ.. ಚಲನಚಿತ್ರವನ್ನು ನೋಡಿ... ಹೀಗೆ ಸ್ವಲ್ಪ ಸ್ವಲ್ಪ ಜನರು ಗುರುತಿಸುತ್ತಿದ್ದರು. ಕಾಂತಾರ ಬಂದ ಮತ್ತೆ ನಾನೇ ಆ ಶೀಲಾ ಪಾತ್ರಧಾರಿ ಅಂತ confirm ಆಗಿ ಯಾರಾದರೂ ಹೇಳಿದರೆ ಮಾತ್ರ ಗುರುತಿಸುತ್ತಿದ್ದಾರೆ. ಇಂಟರ್ವ್ಯೂಗಳನ್ನು ನೋಡಿ ನನ್ನನ್ನು ಗುರುತಿಸುತ್ತಿದ್ದಾರೆ. ಇದು ತುಂಬಾ ಖುಷಿಯ ವಿಷಯ.


ಚಿತ್ರರಂಗಕ್ಕೆ ಅಥವಾ ನಾಟಕ ರಂಗಕ್ಕೆ ಬರಲು ಬಯಸುವ ಯುವ ಕಲಾವಿದರಿಗೆ ನಿಮ್ಮ ಸಲಹೆಗಳು ಏನು:-

ಪ್ರಾಮಾಣಿಕತೆ.


ನಿಮ್ಮ ಮುಂದಿನ ಯೋಜನೆಗಳು:-

ರಂಗಭೂಮಿಯಲ್ಲಿ ಮುಂದಿನ ಪೀಳಿಗೆ ಬರುವವರೆಗೂ ಯಾವತ್ತಿಗೂ ನನ್ನ ಹೆಸರು ಉಳಿಯಬೇಕು. ಚಿತ್ರರಂಗದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಮುಂದೆ ಹೋಗಬೇಕು. ಯಾವ ಪಾತ್ರ ಕೊಟ್ಟರೂ ಸೈ ಅನ್ನುವಂತೆ ನಟನೆಯನ್ನು ಮಾಡಬೇಕು.


ಚಿತ್ರರಂಗದಲ್ಲಿ ಅಥವಾ ನಾಟಕದಲ್ಲಿ ಯಾವ ರೀತಿಯ ಪಾತ್ರವನ್ನು ಮಾಡಲು ಬಯಸುತ್ತೀರಿ:-

ನಾನು ವಯಸ್ಸಾದ ಪಾತ್ರ, ಅಮ್ಮನ ಪಾತ್ರ ಎಲ್ಲಾ ಮಾಡಿದ್ದೇನೆ. ಇನ್ನು ಮುಂದಕ್ಕೆ ಉದಾಹರಣೆಗೆ ಕನ್ನಡ ಚಲನಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ಮಾಡುವಂತಹ ಪಾತ್ರವನ್ನು ಮಾಡುವ ಬಯಕೆ ಇದೆ.

ಅವರು ನಿರ್ವಹಿಸುವ ರೀತಿಯಲ್ಲಿ ಅಲ್ಲದಿದ್ದರೂ ತಕ್ಕ ಮಟ್ಟಿಗಾದರೂ ಅವರ ತರಹ ಪಾತ್ರವನ್ನು ಮಾಡಬೇಕು ಎಂಬ ಬಯಕೆ ಇದೆ.


ತುಳುನಾಡ ಬೊಳಿ, ಹುಣ್ಣಮೆದ ಚಂದ್ರಲೇಖ, ಮಿನ್ಕಕೂಂದು ಇಪುನಾ‌ ಕದಿಕೆದ ಕನ್ಯೆ ಇನ್ನು ಹಲವಾರು ಬಿರುದುಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ.


ನಾಟಕ ರಂಗದಲ್ಲಿ ಸಿಕ್ಕ ಪ್ರಶಸ್ತಿಗಳು:-

♦ 2001 "ಬೈರನ ಬದುಕು" ನಾಟಕದಲ್ಲಿ ಉತ್ತಮ ಪೋಷಕ ನಟಿ.

♦ 2001 "ದೇವೇರ್ ಎನ್ನ ಉಲ್ಲಾಯೇ" ನಾಟಕದಲ್ಲಿ ದ್ವಿತೀಯ ಉತ್ತಮ ನಟಿ.

♦ 2002 "ಹೊನ್ನೂರ್ ದ" ಕಥೆ ನಾಟಕದಲ್ಲಿ ಶ್ರೇಷ್ಠ ನಟಿ ದ್ವಿತೀಯ.

♦ 2003 "ಬಂಗಾರದ ಬಂಡಿ" ನಾಟಕದಲ್ಲಿ ಶ್ರೇಷ್ಠ ನಟಿ ದ್ವಿತೀಯ.

♦ 2005 "ಭಯ್ಯ ಮಲ್ಲಿಗೆ" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2005 ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಬೆಂಗಳೂರು "ಕೋಣ ಕೋದಂಡ" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2005 "ಗಗ್ಗರ" ನಾಟಕದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ.

♦ 2006 "ತ್ರಿಶಂಕು" ನಾಟಕದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ.

♦ 2006 "ಭೈರವನ ಮಹಿಮೆ" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2007 "ಕಾಂತಬಾರೆ ಬೂದ ಬಾರೆ" ನಾಟಕದಲ್ಲಿ ಪೋಷಕ ನಟಿ ಪ್ರಥಮ.

♦ 2008 "ಏಕಲವ್ಯ" ನಾಟಕದಲ್ಲಿ ಶ್ರೇಷ್ಠ ನಟಿ ತೃತೀಯ.

♦ 2009 "ಕಿಟ್ಟಪ್ಪನ ಕಿತಾಪತಿ" ನಾಟಕದಲ್ಲಿ ಶ್ರೇಷ್ಠ ನಟಿ ದ್ವಿತೀಯ.

♦ 2011 "ಕಾರ್ನಿಕದ ಬಾಲೆಲು" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2012 " ದಿ ಇನ್ಸ್ಪೆಕ್ಟರ್ ಜನರಲ್" ನಾಟಕದಲ್ಲಿ ಶ್ರೇಷ್ಠ ನಟಿ ದ್ವಿತೀಯ.

♦ 2013 "ತುಳು ನಾಡ್ ದ ಬೂಳಿಲು" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2015 "ಮಾರಿ ಗಿಡಪುಲೇ" ನಾಟಕದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ.

♦ 2016 "ಸೂರ್ಯ ಕಂತಿಯೇ" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2017 "ಬಗ್ಗನ ಭಾಗ್ಯ" ನಾಟಕದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ.

♦ 2022 "ಗಾವುದ ಪುಂಚೇ" ನಾಟಕದಲ್ಲಿ ಶ್ರೇಷ್ಠ ನಟಿ ಪ್ರಥಮ.

♦ 2022 ಕಾರ್ಕಳದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಟಿ ಪ್ರಥಮ.

ಹೀಗೆ ಹಲವಾರು ಪ್ರಶಸ್ತಿ ಪತ್ರಗಳನ್ನು ಇವರ ಮುಡಿಗೇರಿಸಿಕೊಂಡಿದ್ದಾರೆ. ಹಲವಾರು ನಾಟಕಗಳಿಗೆ ನಿರ್ದೇಶನವನ್ನು ಮಾಡಿರುತ್ತಾರೆ.


ಅಭಿನಯಿಸಿದ ಧಾರಾವಾಹಿಗಳು:-

ಸರಸಮ್ಮನ ಸಮಾಧಿ, ಅವರವರ ಸುಖ ದುಃಖ ಅವರವರಿಗೆ, ಯಾಕೆ ಹೀಗೆ ನಮ್ಮ ನಡುವೆ, ಮರಣಬಲೆ, ವಿಧಿ, ಹಳ್ಳಿಮನೆ, ಜೀವ, ಪ್ರೀತಿದ ಬದುಕು ಧಾರಾವಾಹಿಗಳಲ್ಲಿ ಅಭಿನಯವನ್ನು ಮಾಡಿರುತ್ತಾರೆ ಚಂದ್ರಕಲಾ ರಾವ್.


ಕಿರುಚಿತ್ರ ಶವ, ಪ್ರೀತಿಯ ಸೆಳೆತ ಇನ್ನು ಹಲವಾರು ಅವಾರ್ಡ್ ಮೂವಿಗಳಲ್ಲಿ ಅಭಿನಯವನ್ನು ಮಾಡಿದ್ದಾರೆ.

ಗುಲಾಬಿ ಟಾಕೀಸ, ಭುಗಿಲು, ಕಾರಂತ ಅಜ್ಜನಿಗೊಂದು ಪತ್ರ, ಮಾಯದ ಜಿಂಕೆ, ಉಳಿದವರು ಕಂಡಂತೆ, ಮಡೆ ಮಕ್ಕಿ, ಕುಶಾಲ್ದ ಜವನೆರ್, ರಿಕ್ಕಿ, ಬಿಲಿಂಡರ್, ಕಟಕ, ಕನ್ಯಾ ರಾಶಿ ನಕ್ಷತ್ರ, ಗೋಲ್ಮಾಲ್, ಕಾಂತಾರ. ಇನ್ನು ಕೆಲವು ಚಿತ್ರಗಳು ತೆರೆ ಕಾಣಲಿದೆ.


ಮದುವೆಯ ನಂತರದ ದಿನಗಳಲ್ಲಿ ಇವರ ಪತಿ ಶಂಕರ್ ನಾರಾಯಣ್ ಪೆರ್ಡೂರು ಸಂಪೂರ್ಣ ಪ್ರೋತ್ಸಾಹ ನೀಡಿ ಈ ಕಲಾ ರಂಗದಲ್ಲಿ ಮುಂದುವರೆಯಲು ಸಹಕರಿಸುತ್ತಿದ್ದಾರೆ. ಹಾಗೆಯೆ ಐದು ವರ್ಷದ ಪುಟ್ಟ ಮಗಳು ರಾಘವಿ ಕೂಡ ಅಮ್ಮನನ್ನು ಈ ರಂಗಕ್ಕೆ ಹೋಗಲು ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದಾಳೆ. ಇದು ನನಗೆ ಸಿಕ್ಕ ದೇವರ ಆಶೀರ್ವಾದ. ಹೀಗೆ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸದಾ ನನ್ನ ಮೇಲಿರಲಿ ಎಂದು ಹೃದಯ ಸ್ಪರ್ಶಿ ಕೇಳಿಕೊಳ್ಳುತ್ತಿದ್ದೇನೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top