ಉರುವಾಲು ಶ್ರೀ ಭಾರತೀ ಆಂಗ್ಲಮಾಧ್ಯಮ ಶಾಲೆ: 'ಶುಚೀ ಜೀವನ ದರ್ಶನ' ಚಿಂತನ ಕಾರ್ಯಕ್ರಮ

Upayuktha
0

ಬೆಳ್ತಂಗಡಿ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ (ಜು.1) 'ಶುಚೀ ಜೀವನ ದರ್ಶನ'ದ ಬಗ್ಗೆ ಚಿಂತನ ಕಾರ್ಯಕ್ರಮ ಜರುಗಿತು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) ಕರ್ನಾಟಕ, ಬೆಳ್ತಂಗಡಿ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭರತೇಶ್ ಶೆಟ್ಟಿ ಎಕ್ಕಾರು ಅವರು ಭಾಗವಹಿಸಿ, ಪೌರಾಣಿಕ ಕಥೆಗಳ ಉದಾಹರಣೆ ಸಹಿತ ಪಾಲಿಸಬೇಕಾದ ಜೀವನದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳ ಮನ ಮುಟ್ಟುವಂತೆ ವಿವರಿಸಿದರು. ಸತ್ಸಾಧನೆಗೆ ನಿರಂತರ ಪ್ರಯತ್ನ ಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತಾ ಕೆ.ಆರ್. ಅಧ್ಯಕ್ಷತೆ ವಹಿಸಿ ಪ್ರೇರಣಾಯುಕ್ತ ಮಾತುಗಳನ್ನಾಡಿದರು. ಶಾಲಾ ವಿದ್ಯಾರ್ಥಿನಿಯರಾದ ಕು. ಅನುಜ್ಞಾ, ಕು. ಕೃಪಾಶ್ರೀ, ಕು. ಸಹನಾ, ಕು. ಶರಣ್ಯ ಹಾಗು ಕು. ರಿಷಿಕಾ ರವರ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡಿತು.

ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಸ್ವಾಗತಿಸಿದರು. ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು.  ಶಾಲಾ ಸಹ ಶಿಕ್ಷಕಿ ಶ್ರೀಮತಿ ದಿವ್ಯ ಶೆಟ್ಟಿ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿ ಸದಸ್ಯರು, ಶಿಕ್ಷಕ ವೃಂದದವರು ಹಾಜರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top