ಉಜಿರೆ ಎಸ್.ಡಿ.ಎಂ. ಕಾಲೇಜಿನ ಕಚೇರಿ ಅಧೀಕ್ಷಕರಾಗಿ ದಿವಾಕರ ಪಟವರ್ಧನ್ ನೇಮಕ

Upayuktha
0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಚೇರಿ ಅಧೀಕ್ಷಕರಾಗಿ ದಿವಾಕರ ಪಟವರ್ಧನ್ ಮುಂಡಾಜೆ ಅವರು ಪದೋನ್ನತಿ ಹೊಂದಿದ್ದಾರೆ. ಯುವರಾಜ್ ಪೂವಣಿ ಅವರು ಹುದ್ದೆಯಿಂದ ಸೇವಾನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ.


ಪಟವರ್ಧನ್ ಅವರು ಕಳೆದ 20 ವರ್ಷಗಳಿಂದ ಕಾಲೇಜಿನಲ್ಲಿ ಸೀನಿಯರ್ ಅಕೌಂಟ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜು.14ರಂದು ಕಚೇರಿ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ರಿಜಿಸ್ಟ್ರಾರ್ ಗಳಾದ ಶಶಿಶೇಖರ ಎನ್. ಕಾಕತ್ಕರ್ ಹಾಗೂ ನಂದಾ ಕುಮಾರಿ, ನಿವೃತ್ತ ಕಚೇರಿ ಅಧೀಕ್ಷಕ ಯುವರಾಜ್ ಪೂವಣಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top