ಯುವ ಪೀಳಿಗೆಯ ಆಲೋಚನೆ ಸ್ಪೂರ್ತಿದಾಯಕ : ಡಾ.ಎಂ. ಜನಾರ್ಧನ್

Upayuktha
0

ಉಜಿರೆ: ವಿಭಿನ್ನವಾಗಿ ಆಲೋಚಿಸುವ ಸಾಮಥ್ರ್ಯವಿರುವ ಈಗಿನ ಯುವಪೀಳಿಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯದೊಂದಿಗೆ ಗುರುತಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಯ ನಿರ್ದೇಶಕರಾದ ಡಾ. ಎಂ. ಜನಾರ್ಧನ್‍ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಬಿ.ಎ. ವಿಭಾಗದ ವಿದ್ಯಾರ್ಥಿಗಳಾದ ಗಣೇಶ ಮತ್ತು ಅಕ್ಷಯ್ ಬರೆದ 'ಡಿಕ್ಷನರಿ ಆಫ್ ಮಾಡರ್ನ್ ಬ್ಯಾಂಕಿಂಗ್' ಮತ್ತು 'ಎವಲ್ಯೂಷನ್‍ ಆಫ್‍ ದಥಾರ್' ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.  

   

ಇಂದಿನ ಯುವ ಮನಸ್ಸುಗಳು ಯಾವುದೇ ವಿಷಯವನ್ನಾದರೂ ವಿಶಿಷ್ಟವಾಗಿ ಆಲೋಚಿಸುತ್ತವೆ. ಇಂತಹ ಆಲೋಚನೆಗಳಿಂದ ಇತರರಿಗೂ ಸ್ಪೂರ್ತಿ ನೀಡುತ್ತವೆ ಎಂದು ಹೇಳಿದರು.  'ಡಿಕ್ಷನರಿಆಫ್ ಮಾಡರ್ನ್ ಬ್ಯಾಂಕಿಂಗ್' ಒಂದು ವಿಶಿಷ್ಟ ಪುಸ್ತಕ, ಬ್ಯಾಂಕಿನ ಆಯಾಮಗಳು ಅಷ್ಟು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕಿನಎಲ್ಲ ಮಾಹಿತಿಗಳು ಒಳಗೊಂಡಿರುವ ಈ ಪುಸ್ತಕ ಹಲವರಿಗೆ ಉಪಯುಕ್ತವಾಗುತ್ತದೆ. ಬಿ.ಬಿ.ಎ. ವಿಭಾಗವು ಹೊಸ ರೀತಿಯಾದ ಆಲೋಚನೆಯೊಂದಿಗೆ ಗುರುತಿಸಿಕೊಂಡ ಇಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿಸಿದೆ ಎಂದರು. 


"ಬಾಲ್ಯದಿಂದಲೂ ಬ್ಯಾಂಕ್ ನೌಕರನಾಗುವ ಆಸೆ ಇತ್ತು. ನನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಖಾತಾ ಪುಸ್ತಕದ ವ್ಯವಹಾರವಿತ್ತು, ನಂತರ ತಂತ್ರಜ್ಞಾನ ಬದಲಾಗಿ ಕಂಪ್ಯೂಟರ್ ಪದ್ಧತಿಯಿಂದ ಹಣಕಾಸಿನ ವ್ಯವಹಾರ ಪ್ರಾರಂಭವಾಯಿತು, ಇಂದಿನ ದಿನಗಳಲ್ಲಿ ಕೊಡ್ ಬ್ಯಾಂಕಿಂಗ್ ಪದ್ದತಿ ಚಾಲ್ತಿಯಲ್ಲಿದೆ. ಪ್ರಸ್ತುತ ದಿನಮಾನದಲ್ಲಿ ದೂರದ ಊರಿನಲ್ಲಿದ್ದರೂ ನಮ್ಮ ಅಂಗೈಯಲ್ಲೇ ಬ್ಯಾಂಕಿನ ವ್ಯವಹಾರ ಮಾಡುವವರೆಗೆ ತಂತ್ರಜ್ಞಾನ ಬೆಳೆದು ನಿಂತಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು.   


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶಾಂತಿಪ್ರಕಾಶ್ ಮಾತನಾಡಿದರು. ವೃತ್ತಿಜೀವನದಲ್ಲಿ ವೃತ್ತಿಪರ ಆರ್ಹತೆ ಜೊತೆಗೆ ಕೆಲವು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಕೌಶಲ್ಯಗಳ ಜೊತೆಗೆ ಪರೋಪಕಾರ ಗುಣವನ್ನು ಸಹ ಬೆಳೆಸಿಕೊಳ್ಳಬೇಕಾಗುತ್ತದೆ ಎಂದರು. 

  

ಎಸ್.ಡಿ.ಎಂ.ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ ನೂತನ ಕೃತಿಗಳನ್ನು ಬರೆದ ವಿದ್ಯಾರ್ಥಿಗಳ ಪ್ರಯೋಗಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಾಲೇಜು ಮಟ್ಟದಲ್ಲಿ ನಡೆಯುವಎಲ್ಲಾ ಪಠ್ಯೇತರ ಚಟುವಟಿಕೆಗಳು ಪೂರಕವಾಗಿರುತ್ತವೆ. ವಿದ್ಯಾರ್ಥಿಗಳು ತಾವು ಇಷ್ಟಪಟ್ಟ ಔದ್ಯೋಗಿಕ ಕ್ಷೇತ್ರದಲ್ಲಿ ಪರಿಣಿತಿ ಹೊಂದಬೇಕು, ಅದು ಅವರ ವ್ಯಕ್ತಿತ್ವ,ಜ್ಞಾನ,ಕೌಶಲ್ಯದ ಪ್ರತಿಬಿಂಬವಾಗಿರಬೇಕು. ಮೌಲ್ಯಗಳು ಮತ್ತು ನೀತಿಗಳನ್ನು ಹೊಂದಿರುವ ವ್ಯಕ್ತಿಗಳಾಗಿರಬೇಕು ಎಂದರು.    


ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎ.ಜಯಕುಮಾರ್ ಶೆಟ್ಟಿ ಮಾತನಾಡಿದರು. ನಾವು ಶಬ್ದಕೋಶವನ್ನು ಓದಿದಾಗ ಅದರಲ್ಲಿರುವ ಹಲವಾರು ಅಂಶಗಳು ನಮಗೆ ತಿಳಿಯುತ್ತವೆ. ಆಗಲೇ ನಮ್ಮ ಕಲಿಯುವಿಕೆಯ ಪ್ರಾರಂಭವಾಗುತ್ತದೆ. ಯಾವಾಗಲೂ ಅಂತರ್ಜಾಲದ ಮೊರೆ ಹೋಗುವುದಕ್ಕಿಂತ ಗ್ರಂಥಾಲಯವನ್ನು ಕಲಿಯುವಿಕೆಗೆ ಬಳಸಿಕೊಳ್ಳಬೇಕು. ಕಲಿಯುವಿಕೆಯಿಂದಲೇ ವಿದ್ಯಾರ್ಥಿ ಜೀವನದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. 


ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದಡೀನ್ ಶಕುಂತಲಾ ಸ್ವಾಗತಿಸಿದರೆ,  ಪ್ರಾಧ್ಯಾಪಕರಾದ ಶರಶ್ಚಂದ್ರಕೆ.ಎಸ್. ವಂದಿಸಿದರು. ಶಾರ್ವರಿ ಮತ್ತು ಸ್ಟೆಲ್ವಿನ್‍ ಕಾರ್ಯಕ್ರಮ ನಿರೂಪಿಸಿದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top