ಉಡುಪಿ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ: ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ

Chandrashekhara Kulamarva
0

ಫೈಲ್ ಫೋಟೋ


ಮಂಗಳೂರು: ಉಡುಪಿ ಮೊಬೈಲ್‌ ಚಿತ್ರೀಕರಣ ಪ್ರಕರಣ ಸೂಕ್ತ ತನಿಖೆಗೆ ದ.ಕ. ಬಿಜೆಪಿ ಆಗ್ರಹ ಉಡುಪಿ ನಗರದ ಖಾಸಗಿ ನೇತ್ರ ಚಿಕಿತ್ಸಾಲಯ ಮತ್ತು ನರ್ಸಿಂಗ್‌ ಹೋಂನ ಮಹಿಳಾ ಶೌಚಾಲಯದಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರು ಮೊಬೈಲ್‌ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣವನ್ನು ಪೋಲಿಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಆಗ್ರಹಿಸಿದ್ದಾರೆ.


ವಿಡಿಯೋ ವೈರಲ್‌ ಆಗಿಲ್ಲ ಎಂಬ ಮಾತ್ರಕ್ಕೆ ಅಥವಾ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ ಕೂಡಲೇ ಈ ಪ್ರಕರಣವನ್ನು ಕೈಬಿಡಲು ಸಾಧ್ಯವಿಲ್ಲ. ವಿಡಿಯೋ ಚಿತ್ರೀಕರಣ ಮಾಡಿದ ಅನ್ಯಕೋಮಿನ ವಿದ್ಯಾರ್ಥಿನಿಯರು ಹಲವು ಸಮಯದಿಂದ ವಿಡಿಯೋ ಚಿತ್ರೀಕರಣ ಮಾಡಿ, ಅನ್ಯಕೋಮಿನ ಹುಡುಗರಿಗೆ ಕಳುಹಿಸುತ್ತಿದ್ದಾರೆ. ವಿಡಿಯೋ ಸ್ವೀಕರಿಸಿದ ಅನ್ಯಕೋಮಿನ ಹುಡುಗರು ವಿಡಿಯೋದಲ್ಲಿ ಇರುವ ವಿದ್ಯಾರ್ಥಿನಿಯರನ್ನು ಬ್ಲಾಕ್‌ಮೈಲ್‌ ಮಾಡಿ. ದುರುಪಯೋಗ ಪಡಿಸಿಕೊಳ್ಳುವ ಸಂಶಯ ಕಂಡುಬರುತ್ತದೆ. ಈ ಅನ್ಯಕೋಮಿನ ವಿದ್ಯಾರ್ಥಿನಿಯರಿಗೆ ಈ ಕೃತ್ಯ ನಡೆಸಲು ಅನ್ಯಕೋಮಿನ ಹುಡುಗರ ಬೆಂಬಲ ಇಲ್ಲದೇ ಸಾದ್ಯವಿಲ್ಲ. ಆದುದರಿಂದ ಈ ಪ್ರಕರಣದ ಬಗ್ಗೆ ಸ್ವಯಂ ಕೇಸು ದಾಖಲಿಸಿ ಸಮಗ್ರ ತನಿಖೆ ಮಾಡಬೇಕೆಂದು ದಕ್ಷಿಣ ಕನ್ನಡ ಬಿಜೆಪಿ ಅಗ್ರಹಿಸುತ್ತದೆ ಎಂದು ಸುದರ್ಶನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

إرسال تعليق

0 تعليقات
إرسال تعليق (0)
To Top